ಕರ್ನಾಟಕ

karnataka

ETV Bharat / bharat

ಸಿನಿಮೀಯ ಶೈಲಿಯಲ್ಲಿ ಲಾರಿ ಹೈಜಾಕ್​... 7 ಕೋಟಿ ರೂ. ಮೌಲ್ಯದ ಮೊಬೈಲ್​ ಕಳ್ಳತನ! - ಲಾರಿ ಹೈಜಾಕ್​​

ಮೊಬೈಲ್​​​ ಹೊತ್ತು ಸಾಗುತ್ತಿದ್ದ ಲಾರಿ ಹೈಜಾಕ್​ ಮಾಡಿರುವ ಕಳ್ಳರು ಬರೋಬ್ಬರಿ 7 ಕೋಟಿ ಮೌಲ್ಯದ ಸೆಲ್​ ಫೋನ್​ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

MOBILE PHONES LORRY
MOBILE PHONES LORRY

By

Published : Aug 26, 2020, 6:00 PM IST

Updated : Aug 26, 2020, 9:05 PM IST

ಚಿತ್ತೂರ್​(ಆಂಧ್ರಪ್ರದೇಶ):ಮೊಬೈಲ್​ ಸಾಗಿಸುತ್ತಿದ್ದ ಲಾರಿ ಸಿನಿಮೀಯ ಶೈಲಿಯಲ್ಲಿ ಹೈಜಾಕ್​ ಮಾಡಿರುವ ದುಷ್ಕರ್ಮಿಗಳು ಅದರಲ್ಲಿದ್ದ 7 ಕೋಟಿ ರೂ. ಮೌಲ್ಯದ ಮೊಬೈಲ್​ ದೋಚಿ ಪರಾರಿಯಾಗಿದ್ದಾರೆ.

ಮೊಬೈಲ್​ ಸಾಗಿಸ್ತಿದ್ದ ಲಾರಿ ಹೈಜಾಕ್

ಆಂಧ್ರಪ್ರದೇಶ - ತಮಿಳುನಾಡು ಗಡಿಯಲ್ಲಿ ಈ ಘಟನೆ ನಡೆದಿದೆ. ಕಾಂಚಿಪುರಂ ಶ್ರೀಪೆರುಂಬೂರಿನಿಂದ ಮುಂಬೈಗೆ ತೆರಳುತ್ತಿದ್ದ ಲಾರಿಯಲ್ಲಿ ಶಿಯೋಮಿ ಕಂಪನಿ ಮೊಬೈಲ್​ಗಳಿದ್ದವು. ಗಡಿಯಲ್ಲಿ ಲಾರಿ ಬರುತ್ತಿದ್ದಂತೆ ಅದನ್ನ ತಡೆದಿರುವ ದುಷ್ಕರ್ಮಿಗಳು ಲಾರಿ ಚಾಲಕನನ್ನು ಕಟ್ಟಿಹಾಕಿದ್ದಾರೆ.

7 ಕೋಟಿ ರೂ. ಮೌಲ್ಯದ ಮೊಬೈಲ್​ ಕಳ್ಳತನ

ಇದಾದ ಬಳಿಕ ಲಾರಿಯಲ್ಲಿದ್ದ ಮೊಬೈಲ್​ ಮತ್ತೊಂದು ವಾಹನಕ್ಕೆ ಹಾಕಿಕೊಂಡು ಸ್ಥಳದಿಂದ ಅವರು ಪರಾರಿಯಾಗಿದ್ದಾಗಿ ತಿಳಿದು ಬಂದಿದೆ. ಲಾರಿಯಲ್ಲಿ ಒಟ್ಟು 16 ಪೆಟ್ಟಿಗೆಗಳಲ್ಲಿ 15,000 ಸಾವಿರಕ್ಕೂ ಅಧಿಕ ಮೊಬೈಲ್​ಗಳಿದ್ದು, 8 ಪೆಟ್ಟಿಗೆಗಳು ಕಳ್ಳತನವಾಗಿವೆ. ಲಾರಿ ಚಾಲಕನ ದೂರಿನನ್ವಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮೊಬೈಲ್​ನ ಒಟ್ಟು ಮೌಲ್ಯ 7 ಕೋಟಿ ಎಂದು ತಿಳಿದು ಬಂದಿದೆ.

Last Updated : Aug 26, 2020, 9:05 PM IST

ABOUT THE AUTHOR

...view details