ಲಖನೌ: ಕೋವಿಡ್-19 ಆಸ್ಪತ್ರೆಗಳಲ್ಲಿ ಮೊಬೈಲ್ಗಳನ್ನು ಬ್ಯಾನ್ ಮಾಡಿ ಉತ್ತರ ಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ.
ಕೋವಿಡ್-19 ಚಿಕಿತ್ಸೆಗಾಗಿ ಮೀಸಲಿರುವ L-2 ಹಾಗೂ L-3 ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳು ಐಸೋಲೇಷನ್ ವಾರ್ಡ್ಗಳಲ್ಲಿ ಮೊಬೈಲ್ ಫೋನ್ ಬಳಸುವಂತಿಲ್ಲ. ವಾರ್ಡ್ಗಳ ಉಸ್ತುವಾರಿ ಬಳಿ ಮಾತ್ರ ಎರಡು ಫೋನ್ಗಳಿರುತ್ತದೆ. ಇದನ್ನು ಬಳಸಿ ರೋಗಿಗಳು ತಮ್ಮ ಕುಟುಂಬಸ್ಥರೊಂದಿಗೆ ಮಾತನಾಡಬಹುದು.
ಶನಿವಾರ ರಾತ್ರಿ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಮಹಾನಿರ್ದೇಶಕ ಕೆ.ಕೆ. ಗುಪ್ತಾ ನೀಡಿರುವ ಆದೇಶದಲ್ಲಿ ಆಸ್ಪತ್ರೆಗಳ ಅಧಿಕಾರಿಗಳು ಹಾಗೂ ನಿರ್ದೇಶಕರಿಗೆ ವಾರ್ಡ್ಗಳ ಉಸ್ತುವಾರಿ ಬಳಿ ಇರುವ ದೂರವಾಣಿ ಸಂಖ್ಯೆಯನ್ನು ರೋಗಿಗಳ ಕುಟುಂಬಸ್ಥರಿಗೆ ನೀಡುವಂತೆ ಸೂಚಿಸಲಾಗಿದೆ.
ಉತ್ತರ ಪ್ರದೇಶದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯಿಂದ ಬಂದಿರುವ ಮಾಹಿತಿ ಪ್ರಕಾರ ರಾಜ್ಯದಲ್ಲಿ ಕಳೆದ 10 ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಅತಿವೇಗವಾಗಿ ಹೆಚ್ಚುತ್ತಿದ್ದು, ಈವರೆಗೆ ಒಟ್ಟು 6049 ಕೇಸ್ಗಳು ಪತ್ತೆಯಾಗಿದ್ದು, 155 ಮಂದಿ ಮೃತಪಟ್ಟಿದ್ದಾರೆ.