ಕರ್ನಾಟಕ

karnataka

ETV Bharat / bharat

ಸಹಜ ಸ್ಥಿತಿಗೆ ಮರಳಿದ ಲಡಾಖ್​... 145 ದಿನಗಳ ಬಳಿಕ ಕಾರ್ಗಿಲ್​ನಲ್ಲಿ ಅಂತರ್ಜಾಲ ಸೇವೆ ಪುನಾರಂಭ! - Mobile Internet services restored,

ಆಗಸ್ಟ್​ 5 ರಿಂದ ಸ್ಥಗಿತಗೊಳಿಸಲಾಗಿದ್ದ ಮೊಬೈಲ್​ ಅಂತರ್ಜಾಲ ಸೇವೆಗಳು ಕಾರ್ಗಿಲ್​ ಜಿಲ್ಲೆಯಲ್ಲಿ ಮತ್ತೆ ಆರಂಭಗೊಂಡಿವೆ.

Mobile Internet services, Mobile Internet services restored, Mobile Internet services restored in Kargil, Kargil Mobile Internet services news, ಮೊಬೈಲ್​ ಅಂತರ್ಜಾಲ ಸೇವೆಗಳು, ಮೊಬೈಲ್​ ಅಂತರ್ಜಾಲ ಸೇವೆಗಳು ಪುನಾರಂಭ, ಕಾರ್ಗಿಲ್​ನಲ್ಲಿ ಮೊಬೈಲ್​ ಅಂತರ್ಜಾಲ ಸೇವೆಗಳು ಪುನಾರಂಭ, ಕಾರ್ಗಿಲ್​ನಲ್ಲಿ ಮೊಬೈಲ್​ ಅಂತರ್ಜಾಲ ಸೇವೆ ಸುದ್ದಿ,
ಸಂಗ್ರಹ ಚಿತ್ರ

By

Published : Dec 27, 2019, 7:47 PM IST

ಕಾರ್ಗಿಲ್: ಹಲವು ದಶಕಗಳಿಂದ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸೌಲಭ್ಯವನ್ನು ರದ್ದು ಮಾಡುವ ಮಹತ್ವದ ತೀರ್ಮಾನಕ್ಕೆ ಕೇಂದ್ರ ಬಂದಿದ್ದು, ಆಗಸ್ಟ್​ 5ರಂದು ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡಿತ್ತು. ಆಗ ಕೆಲವು ನಗರಗಳಲ್ಲಿ ಮೊಬೈಲ್​ ಇಂಟರ್​ನೆಟ್​ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

370 ವಿಧಿ ರದ್ದತಿ ಬಳಿಕೆ ಜಮ್ಮ-ಕಾಶ್ಮೀರ್​ ರಾಜ್ಯ ವಿಭಜನೆಗೊಂಡಿತು. ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶವಾದವು. ಅಮಿತ್ ಶಾ ಘೋಷಣೆ ಪ್ರಸ್ತಾಪ ಮಾಡಿರುವ 370 ವಿಧಿ ರದ್ಧತಿಗೆ ಸದನದಲ್ಲಿ ಭಾರೀ ಕೊಲಾಹಲ ಸೃಷ್ಠಿಸಿತ್ತು. ಅದರಂತೆ ಜಮ್ಮು-ಕಾಶ್ಮೀರ ಮತ್ತು ಲಡಾಖ್​ನಲ್ಲಿಯೂ ಗಲಭೆಯಾಗುವ ಸನ್ನಿವೇಶವಿತ್ತು. ಮುನ್ನೆಚ್ಚರಿಕೆ ಹಿನ್ನೆಲೆ ಲಡಾಖ್​ನ ಕಾರ್ಗಿಲ್​ ಜಿಲ್ಲೆ ಸೇರಿದಂತೆ ಅನೇಕ ನಗರಗಳಲ್ಲಿ ಮೊಬೈಲ್ ಅಂತರ್ಜಾಲ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು

ಬರೋಬ್ಬರಿ 145 ದಿನಗಳ ಬಳಿಕ ಕಾರ್ಗಿಲ್​ ಜಿಲ್ಲೆಯಲ್ಲಿ ಇಂಟರ್​ನೆಟ್ ಸೇವೆ​ ಮತ್ತೆ ಆರಂಭಗೊಂಡಿದೆ. ಕಳೆದ ನಾಲ್ಕು ತಿಂಗಳಿನಿಂದ ಇಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಸಹಜ ಸ್ಥಿತಿಗೆ ಕಾರ್ಗಿಲ್​ ಮರಳಿರುವುದರಿಂದ ಮೊಬೈಲ್​ ಅಂತರ್ಜಾಲ ವ್ಯವಸ್ಥೆ ಪುನಾರಂಭಿಸಲಾಗಿದೆ. ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳದಂತೆ ಸ್ಥಳೀಯ ಧಾರ್ಮಿಕ ಮುಖಂಡರಿಗೆ ಮತ್ತು ಜನರಿಗೆ ಮನವಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details