ಬುಡಾನ್ (ಉತ್ತರ ಪ್ರದೇಶ): ಕಾಕ್ರಾಲ ಗ್ರಾಮದಲ್ಲಿ ಗಸ್ತಿಗೆ ತೆರಳಿದ್ದ ವೇಳೆ ಪೊಲೀಸರ ಮೇಲೆ ಜನರು ಹಲ್ಲೆ ನಡೆಸಿದ್ದಾರೆ. ಇಬ್ಬರು ಕಾನ್ಸ್ಟೇಬಲ್ರಿಂದ ಪಿಸ್ತೂಲ್ ಕಸಿದುಕೊಂಡು, ದೌರ್ಜನ್ಯ ಮೆರೆದಿದ್ದಾರೆ. ಘಟನೆಯಲ್ಲಿ ಓರ್ವ ಕಾನ್ಸ್ಟೇಬಲ್ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಸ್ತಿಗೆ ಹೋಗಿದ್ದ ಪೊಲೀಸರ ಮೇಲೆ ಹಲ್ಲೆ.. ಇಬ್ಬರ ಬಂಧನ - ಬುಡಾನ್ನಲ್ಲಿ ಜನರಿಂದ ಪೊಲೀಸರ ಹಲ್ಲೆ
ಗ್ರಾಮದ ಗಸ್ತಿಗೆ ಹೋಗಿದ್ದ ವೇಳೆ ಇಬ್ಬರು ಪೊಲೀಸರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಉತ್ತರಪ್ರದೇಶದ ಬುಡಾನ್ ಪ್ರದೇಶದಲ್ಲಿ ನಡೆದಿದೆ.
ಬ್ಬರ ಬಂಧನ
ಇಬ್ಬರು ಪೊಲೀಸರ ಮೇಲೆ ಜನರು ಇಟ್ಟಿಗೆ, ಕಲ್ಲುಗಳಿಗಂದ ಹಲ್ಲೆ ನಡೆಸಿದ್ದು, ಅಧಿಕಾರಿ ಅಶೋಕ್ ಭಧೌರಿಯಾಗೆ ಗಂಭೀರ ಗಾಯಗಳಾಗಿವೆ. ತಡೆಯಲು ಹೋದ ಮತ್ತೊಬ್ಬ ಕಾನ್ಸ್ಟೇಬಲ್ ಒ.ಪಿ. ಸಿಂಗ್ ಬಳಿಯಿದ್ದ ಪಿಸ್ತೂಲ್ ಕಸಿದುಕೊಂಡು ಜನತೆ ಅಟ್ಟಹಾಸ ಮೆರೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಹಿರಿಯ ಅಧಿಕಾರಿಗಳು, ಪರಿಸ್ಥಿತಿಯನ್ನ ಹತೋಟಿಗೆ ತಂದಿದ್ದಾರೆ. ಪಿಸ್ತೂಲನ್ನು ಕಸಿದುಕೊಂಡಿದ್ದ ಇಬ್ಬರನ್ನ ಬಂಧಿಸಿ, ತನಿಖೆ ಮುಂದುವರಿಸಿದ್ದೇವೆ ಎಂದು ಬುಡಾನ್ ಎಸ್ಎಸ್ಪಿ ಸಂಕಲ್ಪ ಶರ್ಮಾ ತಿಳಿಸಿದ್ದಾರೆ.