ಪುಣೆ: ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ ತನ್ನ ಸಂಬಂಧಿಕರ ಮೃತದೇಹವನ್ನು ರವಾನಿಸಲು ಆಂಬುಲೆನ್ಸ್ ಸಿಗದ ಕಾರಣ ಕೋಪಗೊಂಡ ಮಹಾರಾಷ್ಟ್ರ ನವ ನಿರ್ಮಾಣ ಸೇನೆಯ (ಎಂಎನ್‌ಎಸ್) ಕಾರ್ಪೋರೇಟರ್, ಸರ್ಕಾರಿ ಅಧಿಕಾರಿಯೊಬ್ಬರ ಕಾರನ್ನು ಒಡೆದು ನುಚ್ಚುನೂರು ಮಾಡಿದ್ದಾರೆ.
ಮೃತದೇಹ ರವಾನಿಸಲು ಸಿಗದ ಆಂಬುಲೆನ್ಸ್: ಕಾರಿನ ಮೇಲೆ ಕಾರ್ಪೋರೇಟರ್ ದಾಳಿ! - ಸರ್ಕಾರಿ ಅಧಿಕಾರಿ ಕಾರಿನ ಮೇಲೆ ಎಂಎನ್‌ಎಸ್ ಕಾರ್ಪೋರೇಟರ್ ದಾಳಿ
ಕೊರೊನಾದಿಂದ ಸಾವನ್ನಪ್ಪಿದ ತನ್ನ ಸಂಬಂಧಿಕರ ಮೃತದೇಹವನ್ನು ರವಾನಿಸಲು ಆಂಬುಲೆನ್ಸ್ ಸಿಗದ ಕಾರಣದಿಂದ ಎಂಎನ್‌ಎಸ್ ಕಾರ್ಪೋರೇಟರ್ ಆಕ್ರೋಶಗೊಂಡು, ಸರ್ಕಾರಿ ಅಧಿಕಾರಿಯೊಬ್ಬರ ಕಾರನ್ನು ಒಡೆದು ನುಚ್ಚುನೂರು ಮಾಡಿದ್ದಾರೆ.
ಕಾರ್ಪೋರೇಟರ್ ವಸಂತ್ ಮೋರೆ ಎಂಬುವರು ಕಾರಿನ ಗಾಜುಗಳನ್ನು ದೊಣ್ಣೆಯಿಂದ ಒಡೆದು ನುಚ್ಚುನೂರು ಮಾಡಿದ್ದಾರೆ. ಇನ್ನು ಇದರ ವಿಡಿಯೋ ಲಭ್ಯವಾಗಿದೆ. ಅಧಿಕಾರಿಯ ಕಾರಿನ ಮೇಲೆ ದಾಳಿ ಮಾಡುವಾಗ, "ಜನರು ಆಂಬ್ಯುಲೆನ್ಸ್ ಪಡೆಯದಿದ್ದರೆ ಅಧಿಕಾರಿಗಳಿಗೆ ವಾಹನಗಳಲ್ಲಿ ಓಡಾಡುವ ಹಕ್ಕಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನ್ನ ಸಂಬಂಧಿಗೆ ಕೊರೊನಾ ಪಾಸಿಟಿವ್ ದೃಢವಾಗಿತ್ತು. ಇದರಿಂದ ಆತ ಸಾವನ್ನಪ್ಪಿದ್ದಾನೆ. ಆತ ಮರಣವನ್ನಪ್ಪಿ ಮೂರೂವರೆ ಗಂಟೆ ಕಳೆದರೂ ಆ್ಯಂಬುಲೆನ್ಸ್ ಲಭ್ಯವಾಗಿಲ್ಲ. ಜನರು ಆಂಬ್ಯುಲೆನ್ಸ್ ಪಡೆಯದಿದ್ದರೆ ಅಧಿಕಾರಿಗಳಿಗೆ ವಾಹನಗಳಲ್ಲಿ ಹೋಗುವ ಹಕ್ಕಿಲ್ಲ" ಎಂದು ಗುಡುಗಿದ್ದಾರೆ.