ಕರ್ನಾಟಕ

karnataka

ETV Bharat / bharat

ವಿಧಾನಸಭೆಯಲ್ಲಿ ಅನುಮತಿಯಿಲ್ಲದ ಪದ ಬಳಕೆ: ಅಧಿವೇಶನದಿಂದ ಜಿಗ್ನೇಶ್​ ಮೇವಾನಿ ಅಮಾನತು - ಅನುಚಿತ ವರ್ತನೆ ಆರೋಪದಡಿ ಧಿವೇಶನದಿಂದ ಜಿಗ್ನೇಶ್​ ಮೇವಾನಿ ಅಮಾನತು

ವಿಧಾನಸಭೆಯಲ್ಲಿ ಅನುಮತಿಯಿಲ್ಲದ ಪದ ಬಳಕೆ ಮಾಡಿದ ಆರೋಪದ ಮೇಲೆ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿ ಅವರನ್ನು 3 ದಿನಗಳ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.

MLA Jignesh Mevani
ಶಾಸಕ ಜಿಗ್ನೇಶ್​ ಮೇವಾನಿ

By

Published : Dec 10, 2019, 4:48 PM IST

ಗಾಂಧಿನಗರ (ಗುಜರಾತ್​):ವಿಧಾನಸಭೆಯಲ್ಲಿ ಅನುಮತಿಯಿಲ್ಲದ ಪದ ಬಳಕೆ ಮಾಡಿದ ಆರೋಪದ ಮೇಲೆ ಪಕ್ಷೇತರ ಶಾಸಕ ಜಿಗ್ನೇಶ್​ ಮೇವಾನಿ ಅವರನ್ನು 3 ದಿನಗಳ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ.

ಗುಜರಾತ್ ವಿಧಾನಸಭೆಯಲ್ಲಿ ಸಂವಿಧಾನ ದಿನದ ಕುರಿತು ಚರ್ಚೆನಡೆಯುತ್ತಿದ್ದ ವೇಳೆ, ಉಪಮುಖ್ಯಮಂತ್ರಿ ನಿತಿನ್​​ ಪಟೇಲ್​ ಸಂವಿಧಾನದ ಕುರಿತು ಮಾತನಾಡುತ್ತಿದ್ದರು, ಈ ವೇಳೆ ಸಭೆಯಲ್ಲಿ ಬಳಸಲು ಅನುಮತಿ ಇಲ್ಲದ ಕೆಲವು ಪರಿಣಾಮಕಾರಿ ಪದಗಳನ್ನು ಬಳಸಿ ಮೇವಾನಿ ಮಾತನಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸ್ಪೀಕರ್​ ರಾಜೇಂದ್ರ ತ್ರಿವೇದಿ, ಪದೇ ಪದೇ ಎಚ್ಚರಿಕೆ ನೀಡಿದರೂ ಮೇವಾನಿ ಮಾತು ನಿಲ್ಲಿಸದ ಕಾರಣ​ ಸದನದಿಂದ ಹೊರಕಳುಹಿಸಲಾಗಿದೆ.

ಶಾಸಕರ ಈ ವರ್ತನೆಯನ್ನು ನೋಡಿದ ಸ್ವತಃ ಗುಜರಾತ್​ ಮುಖ್ಯಮಂತ್ರಿ ವಿಜಯ್​​ ರುಪಾನಿ, ಮೇವಾನಿಯನ್ನು ಕಲಾಪದ ಮೂರು ದಿನಗಳಿಂದ ಅಮಾನತುಗೊಳಿಸುವಂತೆ ಸ್ಪೀಕರ್​ಗೆ ಒತ್ತಾಯಿಸಿದ್ದು, ಅಧಿವೇಶನದಿಂದ ಅಮಾನತುಗೊಳಿಸಿ ಸ್ಪೀಕರ್ ಆದೇಶ ನೀಡಿದ್ದಾರೆ.

ಡಿ.9 ರಂದು ಆರಂಭವಾದ ವಿಧಾನಸಭೆಯ ಚಳಿಗಾಲದ ಅಧಿವೇಶನ ಡಿ.11 ರಂದು ಮುಕ್ತಾಯಗೊಳ್ಳಲಿದೆ.

ABOUT THE AUTHOR

...view details