ಕರ್ನಾಟಕ

karnataka

ETV Bharat / bharat

ಮಿಷನ್​ ಶಕ್ತಿಯಿಂದ ಭಾರತದ ಸಾಮರ್ಥ್ಯ ವಿಶ್ವಕ್ಕೇ ತಿಳಿಯಿತು: ವಿಜ್ಞಾನಿಗಳ ತಂಡಕ್ಕೆ ಮೋದಿ ಶುಭಾಶಯ - ಮೋದಿ

ಭಾಷಣದ ಬಳಿಕ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಿಷನ್ ಶಕ್ತಿಯ ತಂಡಕ್ಕೆ ಶುಭಾಷಯ ಹೇಳಿದ್ದಾರೆ.

ಮೋದಿ ವಿಡಿಯೋ ಕಾನ್ಫರೆನ್ಸ್

By

Published : Mar 27, 2019, 5:48 PM IST

ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಅತಿದೊಡ್ಡ ಸಾಧನೆಗೈದಿರುವ ಭಾರತ ಇಂದು ಆ ವಿಚಾರವನ್ನು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿಬಹಿರಂಗಪಡಿಸಿದ್ದಾರೆ.

ಮಿಷನ್​ ಶಕ್ತಿ ಯಶಸ್ವಿಯಾಗಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್​ಡಿಒ) ಗೆ ಸಂಪೂರ್ಣ ಕ್ರೆಡಿಟ್ ಸಲ್ಲಬೇಕು ಎಂದಿದ್ದರು. ಭಾಷಣದ ಬಳಿಕ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಮಿಷನ್ ಶಕ್ತಿಯ ತಂಡಕ್ಕೆ ಶುಭಾಶಯ ಹೇಳಿದ್ದಾರೆ.

ಇಂದಿನ ಈ ಸಾಧನೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು. ಭಾರತ ಸಾಮರ್ಥ್ಯ ಕಡಿಮೆ ಏನಿಲ್ಲ ಎನ್ನುವುದನ್ನು ನೀವು ಸಾಬೀತುಪಡಿಸಿದ್ದಕ್ಕೆ ಧನ್ಯವಾದ ಎಂದು ಡಿಆರ್​​ಡಿಒ ವಿಜ್ಞಾನಿಗಳ ತಂಡಕ್ಕೆ ಮೋದಿ ಶುಭಾಶಯ ಹೇಳಿದ್ದಾರೆ.

ಆ್ಯಂಟಿ ಸ್ಯಾಟಲೈಟ್ ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದ್ದು ಇದು ಮೇಕ್​ ಇನ್​ ಇಂಡಿಯಾ ಅಭಿಯಾನಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ ಎಂದು ಮೋದಿ ಹೆಮ್ಮೆಯಿಂದ ನುಡಿದಿದ್ದಾರೆ.

ABOUT THE AUTHOR

...view details