ಪಾಟ್ನಾ(ಬಿಹಾರ): ನಗರದ ಹಲವು ಪ್ರದೇಶದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನಾಪತ್ತೆ ಪೋಸ್ಟರ್ಗಳು ಕಾಣಿಸಿಕೊಂಡಿವೆ.
ಪಾಟ್ನಾ ನಗರದಾದ್ಯಂತ ಕಾಣಿಸಿಕೊಂಡ ಬಿಹಾರ ಸಿಎಂ ನಾಪತ್ತೆ ಪೋಸ್ಟರ್! - Bihar CM Nitish Kumar Missing posters news
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮೌನ ತಾಳಿದ ವಿಚಾರವಾಗಿ ಕೆಲವರು ಬಿಹಾರದ ರಾಜಧಾನಿ ಪಾಟ್ನಾ ನಗರದಾದ್ಯಂತ ನಿತೀಶ್ ಕುಮಾರ್ ನಾಪತ್ತೆ ಬ್ಯಾನರ್ಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಪಾಟ್ನಾ ನಗರದಾದ್ಯಂತ ಕಾಣಿಸಿಕೊಂಡ ಬಿಹಾರ ಸಿಎಂ ನಾಪತ್ತೆ ಪೋಸ್ಟರ್! ಬಿಹಾರ ಸಿಎಂ ನಾಪತ್ತೆ ಪೋಸ್ಟರ್, Bihar CM Nitish Kumar](https://etvbharatimages.akamaized.net/etvbharat/prod-images/768-512-5398135-thumbnail-3x2-jay.jpg)
ಬಿಹಾರ ಸಿಎಂ ನಾಪತ್ತೆ ಪೋಸ್ಟರ್
ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮೌನ ತಾಳಿದ ವಿಚಾರವಾಗಿ ಕೆಲವರು ನಗರಾದ್ಯಂತ ನಿತೀಶ್ ಕುಮಾರ್ ನಾಪತ್ತೆ ಬ್ಯಾನರ್ಗಳನ್ನು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯಾನರ್ಗಳ ಮೂಲಕ ತಮ್ಮ ಆಕ್ರೋಶ ಹೊರಹಾಕಿ, ನಿತೀಶ್ ಕುಮಾರ್ ಅಂಧ ಮುಖ್ಯಮಂತ್ರಿ ಎಂದು ಜರಿದಿದ್ದಾರೆ. 'ಸರಿಯಾಗಿ ನೋಡಿ. ಈ ಮುಖವನ್ನು ಹಲವು ದಿನಗಳಿಂದ ನೋಡಿಯೂ ಇಲ್ಲ. ಇವರ ಬಗ್ಗೆ ಕೇಳಿಯೂ ಇಲ್ಲ. ಇವರನ್ನು ಹುಡುಕಿ ಕೊಟ್ಟವರಿಗೆ ಬಿಹಾರ ಸದಾ ಆಭಾರಿಯಾಗಿರುತ್ತದೆ' ಎಂದು ಪೋಸ್ಟರ್ಗಳಲ್ಲಿ ಬರೆಯಲಾಗಿದೆ.