ಕರ್ನಾಟಕ

karnataka

ETV Bharat / bharat

ಆಪರೇಷನ್​ ಕಮಲ: ಕಾರಣ ರಿವೀಲ್​ ಮಾಡಿದ ಕಾಂಗ್ರೆಸ್​ ಬಂಡಾಯ ಶಾಸಕ - Madyapradesh Politicts

ಕಮಲ್​​ನಾಥ್ ಸರ್ಕಾರವನ್ನು ಕೆಡವಲು ಬಿಜೆಪಿ ಪ್ರಯತ್ನಿಸುತ್ತಿದ್ದು, ಕಾಂಗ್ರೆಸ್​ನ ಮೂರು ಮತ್ತು ಓರ್ವ ಪಕ್ಷೇತರ ಶಾಸಕನನ್ನು ಬಿಜೆಪಿ ಅಪಹರಿಸಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಆರೋಪಿಸಿದ್ದರು.

Madyapradesh Politicts
ಬಿಸಾಹುಲಾಲ್​ ಸಿಂಗ್​

By

Published : Mar 9, 2020, 8:32 AM IST

ಭೋಪಾಲ್​: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿ, ಬೆಂಗಳೂರಿನಲ್ಲಿ ಇದ್ದರು ಎನ್ನಲಾದ ಎಂಎಲ್​ಎ ಬಿಸಾಹುಲಾಲ್​ ಸಿಂಗ್​ ಮಧ್ಯಪ್ರದೇಶಕ್ಕೆ ವಾಪಸ್​ ಆಗಿದ್ದಾರೆ. ​

ತಾವು ಯಾಕೆ ಬೆಂಗಳೂರಿಗೆ ಹೋಗಿದ್ದೆ ಎಂಬ ವಿಚಾರವನ್ನೂ ಬಿಚ್ಚಿಟ್ಟಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಸಿಂಗ್​, " ನಾನು ತೀರ್ಥಯಾತ್ರೆ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ದೇವಾಲಯಗಳಿಗೆ ಭೇಟಿ ನೀಡಿದ್ದೆ. ಐದು ಬಾರಿ ಶಾಸಕನಾದರೂ ತಮಗೆ ಮಂತ್ರಿ ಮಾಡದಿರುವ ಬಗ್ಗೆ ಅತೃಪ್ತಿ ಇದ್ದದ್ದು ನಿಜ. ಹಾಗಾಗೇ ನಾನು ದಕ್ಷಿಣ ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಪ್ರವಾಸ ಕೈಗೊಂಡಿದ್ದೆ. ನನಗಿಂತ ಕಿರಿಯರಿಗೆ ಕ್ಯಾಬಿನೆಟ್​ನಲ್ಲಿ ಸ್ಥಾನ ನೀಡಲಾಗಿದೆ. ಹಾಗಾದರೆ ನಾನು ಮಾಡಿದ ಪಾಪ ಆದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದೊಂದು ವಾರದಿಂದ ಮಧ್ಯಪ್ರದೇಶದಲ್ಲಿ ಕಮಲನಾಥ್ ಸರ್ಕಾರದ ವಿರುದ್ಧ ಕೆಲಶಾಸಕರು ಅಸಮಾಧಾನಗೊಂಡಿದ್ದಾರೆ. 7-8 ಶಾಸಕರು ಬೇರೆ ಬೇರೆ ಕಡೆ ವಾಸ್ತವ್ಯ ಹೂಡಿದ್ದರು. ಅದರಲ್ಲಿ ಕೆಲವರು ಈಗಾಗಲೇ ರಾಜ್ಯಕ್ಕೆ ಮರಳಿದ್ದಾರೆ ಕೂಡಾ. ಇನ್ನೂ ಕೆಲವರು ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಿದ್ದಾರೆ. ಅವರೆಲ್ಲ ಕೂಡಾ ಶೀಘ್ರವೇ ಭೋಪಾಲ್​ಗೆ ಮರಳುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಇದೇ ವೇಳೆ ಮುಂದುವರೆದು ಮಾತನಾಡಿರುವ ಬಿಸಾಹುಲಾಲ್​ ಸಿಂಗ್​, ನಾನು ಕಳೆದ ನಲವತ್ತು ವರ್ಷಗಳಿಂದ ಕಾಂಗ್ರೆಸ್​ನಲ್ಲಿದ್ದೇನೆ. ಸಿಎಂ ತಕ್ಷಣವೇ ಕ್ಷೇತ್ರಗಳಲ್ಲಿ ಆಗಬೇಕಾದ ಕೆಲಸಗಳನ್ನ ಮಾಡಲಾಗುವುದು ಹಾಗೂ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಸಮಾದಾನಿತರನ್ನ ಕರೆತರಲು ಪ್ರವಾಸೋದ್ಯಮ ಸಚಿವ ಸುರೇಂದ್ರ ಸಿಂಗ್​ ಬಘೇಲಾ ಬೆಂಗಳೂರಿಗೆ ತೆರಳಿದ್ದರು. ಅವರು ಬೆಂಗಳೂರಿನಲ್ಲಿ ಬಿಡುಬಿಟ್ಟಿದ್ದ ಶಾಸಕರೊಂದಿಗೆ ಮಾತನಾಡಿ, ಸಿಂಗ್​ ಅವರನ್ನ ವಾಪಸ್​ ಕರೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ABOUT THE AUTHOR

...view details