ವಾಷಿಂಗ್ಟನ್: ಜಿಮ್ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಪತ್ತೆಯಾಗಿದ್ದ ಭಾರತೀಯ ಮೂಲದ ಯುವತಿ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಮೆರಿಕದ ಚಿಕಾಗೋದಲ್ಲಿ ನಡೆದಿದೆ.
ಅಮೆರಿಕದಲ್ಲಿ ನಾಪತ್ತೆಯಾಗಿದ್ದ ಭಾರತೀಯ ಯುವತಿ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆ! - ಅಮೆರಿಕಾದಲ್ಲಿ ಭಾರತೀಯ ಮೂಲದ ಮಹಿಳೆ
ಅಮೆರಿಕದಲ್ಲಿ ಭಾರತೀಯ ಮೂಲದ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಅನೇಕ ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ಕಳೆದ ಎರಡು ವಾರಗಳ(ಡಿಸೆಂಬರ್ 30) ಹಿಂದೆ ನಾಪತ್ತೆಯಾಗಿದ್ದ ಸುರೀಲ್ ಡಾಬಾವಾಲ್ ಕುರಿತು ಆಕೆಯ ಪೋಷಕರು ಶಾಂಬರ್ಗ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಶೋಧ ಕಾರ್ಯ ನಡೆಸಿ ಇದೀಗ ಆಕೆಯ ಶವ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ ಎಂಬಿಎ ಪದವಿ ಪಡೆದುಕೊಂಡಿರುವ ಸುರೀಲ್, ಅಲ್ಲೇ ಇರುವ ತನ್ನ ತಂದೆಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಯಾವ ಕಾರಣಕ್ಕಾಗಿ ಆಕೆಯ ಕೊಲೆ ಮಾಡಲಾಗಿದೆ ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ. ಚಿಕಾಗೋದ ಗ್ಯಾರಿಫೀಲ್ಡ್ ಪಾರ್ಕ್ನಲ್ಲಿ ನಲ್ಲಿಸಲಾಗಿದ್ದ ಬಿಳಿ ಸೆಡಾನ್ ಕಾರ್ನ ಡಿಕ್ಕಿಯಲ್ಲಿ ಶವ ಪತ್ತೆಯಾಗಿದ್ದು, ಹೊದಿಕೆಯಿಂದ ಸಂಪೂರ್ಣವಾಗಿ ಶವ ಮುಚ್ಚಲಾಗಿದೆ.