ಕರ್ನಾಟಕ

karnataka

ETV Bharat / bharat

ನಾಪತ್ತೆಯಾಗಿದ್ದ ಕೊರೊನಾ ಶಂಕಿತ ಶವವಾಗಿ ಪತ್ತೆ! - corona news

ಗಾಂಧಿ ಆಸ್ಪತ್ರೆಯಲ್ಲಿ ಕೋವಿಡ್​-19 ಚಿಕಿತ್ಸೆ ಪಡೆಯುತ್ತಿದ್ದ ನರೇಂದರ್ ಸಿಂಗ್ ಎಂಬ ವ್ಯಕ್ತಿಯ ಕಾಣೆಯಾಗಿದ್ದಾನೆ ಎಂದು ದೂರು ದಾಖಲಾಗಿತ್ತು. ಇದೀಗ ಆ ವ್ಯಕ್ತಿಯ ಶವ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿದೆ.

ಕೋವಿಡ್​-19 ಶಂಕಿತ ವ್ಯಕ್ತಿ ಶವ ಪತ್ತೆ
ಕೋವಿಡ್​-19 ಶಂಕಿತ ವ್ಯಕ್ತಿ ಶವ ಪತ್ತೆ

By

Published : Jun 21, 2020, 6:49 PM IST

ಹೈದರಾಬಾದ್ (ತೆಲಂಗಾಣ): ನಾಪತ್ತೆಯಾಗಿದ್ದ ಕೋವಿಡ್​-19 ಶಂಕಿತ ವ್ಯಕ್ತಿಯು ಹೈದರಾಬಾದ್​ನ​ ಗಾಂಧಿ ಆಸ್ಪತ್ರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.

ನರೇಂದರ್​ ಸಿಂಗ್ ​(39) ಗಾಂಧಿ ಆಸ್ಪತ್ರೆಗೆ ದಾಖಲಾದ ನಂತರ ನಾಪತ್ತೆಯಾಗಿದ್ದಾರೆ ಎಂದು ಜೂನ್​.6 ರಂದು ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೇ. 31 ರಂದು ಇವರಿಗೆ ಉಸಿರಾಟದ ತೊಂದರೆ ಮತ್ತು ಜ್ವರ ಕಾಣಿಸಿಕೊಂಡಿದ್ದರಿಂದ, ಆಸ್ಪತ್ರೆಗೆ ದಾಖಲಿಸಲಾಗಿತ್ತು.

"ದೂರು ಸ್ವೀಕರಿಸಿದ ನಂತರ ನಾವು ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ. ಗಾಂಧಿ ಆಸ್ಪತ್ರೆಗೆ ದಾಖಲಾಗುವ ಮೊದಲು ನರೇಂದರ್ ಸಿಂಗ್ ಉಸ್ಮಾನಿಯಾ ಮತ್ತು ಕಿಂಗ್ ಕೋಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದು ಗಮನಕ್ಕೆ ಬಂದಿದೆ. ತನಿಖೆಯಲ್ಲಿ ನರೇಂದರ್ ಸಿಂಗ್ ಮೇ. 31 ರಂದು ರಾತ್ರಿ 10.30 ಕ್ಕೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಮತ್ತು ಇದು ಅಪರಿಚಿತ ವ್ಯಕ್ತಿಯ ಶವ ಎಂದು ಶವ ಪರೀಕ್ಷೆ ವರದಿಯಲ್ಲಿ ನಮೂದಿಸಲಾಗಿದೆ ಎಂದು ಮಂಗಲ್ಹತ್ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ರಣವೀರ್ ರೆಡ್ಡಿ ಹೇಳುತ್ತಾರೆ.

"ಕೆಲವು ದಿನಗಳ ನಂತರ, ಇದು ನರೇಂದರ್ ಸಿಂಗ್ ಅವರ ದೇಹ ಎಂದು ನಾವು ಗುರುತಿಸಿದ್ದೇವೆ. ಜೂನ್. 19 ರಂದು ಸಿಂಗ್ ಅವರ ಕುಟುಂಬ ಸದಸ್ಯರನ್ನು ದೇಹವನ್ನು ಗುರುತಿಸಲು ಆಸ್ಪತ್ರೆಗೆ ಕರೆಸಲಾಯಿತು. ಆಗ ಇದು ನರೇಂದರ್​ ಸಿಂಗ್​​ ಮೃತದೇಹವೆಂದು ಖಾತರಿಯಾಗಿದೆ. ಶವ ಪರೀಕ್ಷೆ ಮಾಡಿದ ಬಳಿಕ ಶವವನ್ನು ಜೂನ್. 20 ರಂದು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯಿತು "ಎಂದು ರೆಡ್ಡಿ ಹೇಳುತ್ತಾರೆ.

ಇದಕ್ಕೂ ಮುನ್ನ ಗಾಂಧಿ ಆಸ್ಪತ್ರೆಯಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.

ABOUT THE AUTHOR

...view details