ಕೋಲ್ಕತ್ತಾ( ಪಶ್ಚಿಮ ಬಂಗಾಳ): ಪಿಪಿಇ ಕಿಟ್‌ನ ಪ್ರಯೋಜನ ಪಡೆದ ಕೆಲ ದುರಳರು ಕೊರೊನಾ ರೋಗಿಯಿಂದ ಚಿನ್ನದ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಕೊರೊನಾ ರೋಗಿಯಿಂದ ಚಿನ್ನದ ಆಭರಣ ದೋಚಿದ ಖದೀಮರು - ಕೊರೊನಾ ರೋಗಿ
ಕೊರೊನಾ ರೋಗಿಯಿಂದ ಕೆಲ ದುರುಳರು ಆಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಬಂಧ ರೋಗಿ ದೂರು ದಾಖಲು ಮಾಡಿದ್ದಾರೆ.
ಕೊರೊನಾ ರೋಗಿಯಿಂದ ಚಿನ್ನದ ಆಭರಣ ದೋಚಿದ ಖದೀಮರು
ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಆಭರಣ ಕಳೆದುಕೊಂಡ ರೋಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಅಲ್ಲಿನ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.