ಮಣಿಪುರ: ರಾಜ್ಯ ಪ್ರಾಯೋಜಿತ 10 ದಿನಗಳ ಸಂಗೈ ಪ್ರವಾಸೋದ್ಯಮ ಉತ್ಸವ ಪ್ರಾರಂಭವಾಗುವುದಕ್ಕೆ ಒಂದು ದಿನ ಮುಂಚಿತವಾಗಿ, ಅಪರಿಚಿತ ವ್ಯಕ್ತಿಗಳು ಶನಿವಾರ ಇಲ್ಲಿನ ಬಿಎಸ್ಎಫ್ ಹೊರಠಾಣೆ ಬಳಿ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಎಸ್ಎಫ್ ಹೊರಠಾಣೆ ಬಳಿ ಗ್ರೆನೇಡ್ ದಾಳಿ : ಇಬ್ಬರಿಗೆ ಗಂಭೀರ ಗಾಯ - ಇಂಫಾಲ್ನ ಬಿಎಸ್ಎಫ್ ಹೊರಠಾಣೆ ಬಳಿ ಕೈ ಗ್ರೆನೇಡ್ ದಾಳಿ
ರಾಜ್ಯ ಪ್ರಾಯೋಜಿತ 10 ದಿನಗಳ ಸಂಗೈ ಪ್ರವಾಸೋದ್ಯಮ ಉತ್ಸವ ಪ್ರಾರಂಭವಾಗುವುದಕ್ಕೆ ಒಂದು ದಿನ ಮುಂಚಿತವಾಗಿ, ಅಪರಿಚಿತ ವ್ಯಕ್ತಿಗಳು ಶನಿವಾರ ಇಲ್ಲಿನ ಬಿಎಸ್ಎಫ್ ಹೊರಠಾಣೆ ಬಳಿ ಹ್ಯಾಂಡ್ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪಟ್ಟಣದ ಥಂಗ್‌ಮೈಬಾನ್ ಲಿಲಾಸಿಂಗ್ ಖೊಂಗ್‌ನಾಂಗ್‌ಖಾಂಗ್ ಪ್ರದೇಶದ ರಾಜ್ಯ ಅಸೆಂಬ್ಲಿ ಕಟ್ಟಡದ ಬಳಿ ಉಗ್ರರು ಬಾಂಬ್‌ಗಳನ್ನು ಎಸೆದು ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿಯನ್ನು ಗಾಯಗೊಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಜೆ 5.30 ರ ಸುಮಾರಿಗೆ ಕ್ವಾಕೀಥೆಲ್ ಲೀಮಾಖುಜಮ್ ಲೈಕೈ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ದುಷ್ಕರ್ಮಿಗಳನ್ನು ಬಂಧಿಸಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿ ಹೇಳಿದರು. ನವೆಂಬರ್ನಲ್ಲಿ ಮಣಿಪುರ ರಾಜಧಾನಿಯಲ್ಲಿ ನಡೆದ ಐದನೇ ಘಟನೆ ಇದಾಗಿದೆ ಎಂದು ಅಧಿಕಾರಿ ಹೇಳಿದರು.