ಕರ್ನಾಟಕ

karnataka

ETV Bharat / bharat

ಮೋದಿ ಪರ ಮಗಳು ಹಾಡಿದ್ದಕ್ಕೆ, ಅಪ್ಪನಿಗೆ ಹಿಗ್ಗಾಮುಗ್ಗಾ ಥಳಿತ! - undefined

ಲೋಕಸಭೆ ಚುನಾವಣೆ ವೇಳೆ ಅಲಂಕ್ರಯ ರಾಯ್ ಅವರು ಮಗಳು ಗುಡಿಯಾ ಕುಮಾರಿ, ಮೋದಿ ಪರ ಹಾಡು ಹಾಡಿದ್ದರು. ಇದರಿಂದ ಕೋಪಗೊಂಡಿದ್ದ ಕೆಲ ಮಂದಿ, ಆಕೆಯ ತಂದೆ ಮೇಲೆ ದಾಳಿ ನಡೆಸಿರುವ ಘಟನೆ ಬಿಹಾರದ ಕತಿಹಾರದಲ್ಲಿ ನಡೆದಿದೆ.

Bihar

By

Published : Jun 20, 2019, 10:20 AM IST

ಕತಿಹಾರ್​:ಲೋಕಸಭೆ ಚುನಾವಣೆ ವೇಳೆ ಮಗಳು ಮೋದಿ ಪರ ಹಾಡಿದ್ದಕ್ಕೆ, ಆಕೆಯ ತಂದೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಬಿಹಾರದ ಕತಿಹಾರದಲ್ಲಿ ನಡೆದಿದೆ.

ಅಲಂಕೃತ ರಾಯ್ ಎಂಬುವವರು ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಕತಿಹಾರ ಬರಾರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಥಳಿಸಿ ನದಿಗೆ ಎಸೆದ ದುರುಳರು:

ಲೋಕಸಭೆ ಚುನಾವಣೆ ವೇಳೆ ಅಲಂಕ್ರಯ ರಾಯ್ ಅವರು ಮಗಳು ಗುಡಿಯಾ ಕುಮಾರಿ, ಮೋದಿ ಪರ ಹಾಡು ಹಾಡಿದ್ದರು. ಇದರಿಂದ ಕೋಪಗೊಂಡಿದ್ದ ಕೆಲ ಮಂದಿ, ಬಾಲಕಿ ಕುಟುಂಬದ ಬೆನ್ನತ್ತಿದ್ದರು.

ಗಾಯಗೊಂಡ ಅಲಂಕ್ರಯ ರಾಯ್ ಹೇಳಿಕೆ

ಗಾಯಗೊಂಡ ರಾಯ್ ಹೇಳುವಂತೆ, ಕಳೆದ ರಾತ್ರಿ 6-7 ಮಂದಿ ನನ್ನನ್ನು ಬಲವಂತವಾಗಿ ಮನೆಯೊಂದಕ್ಕೆ ಎಳೆದೊಯ್ದು, ಹಿಗ್ಗಾಮುಗ್ಗಾ ಥಳಿಸಿದ್ದರು . ಈ ವೇಳೆ, ನಿಮ್ಮ ಮಗಳು ಮೋದಿ ಪರ ಹಾಡುತ್ತಾಳೆ ಎಂದು ಕೋಪದಿಂದ ಹೇಳುತ್ತಿದ್ದರು. ಆನಂತರ ನನ್ನನ್ನು ನದಿ ದಡಿದಲ್ಲಿ ಎಸೆದುಹೋದರು ಎಂದಿದ್ದಾರೆ.

ನಾಪತ್ತೆಯಾಗಿದ್ದ ರಾಯ್​ ಅವರನ್ನು ಕುಟುಂಬ ಹುಡುಕಾಡುತ್ತಿತ್ತು. ಅವರ ಮನೆಯ ನಾಯಿ, ರಾಯ್ ನದಿ ತಟದಲ್ಲಿ ಬಿದ್ದಿರುವುದನ್ನು ಪತ್ತೆ ಮಾಡಿತ್ತು. ಕುಟುಂಬದವರು ಅಲ್ಲಿಗೆ ಬಂದು ನೋಡಿದಾಗ ರಾಯ್​ ತೀವ್ರ ಅಸ್ವಸ್ಥರಾಗಿದ್ದರು. ಆನಂತರ ಕತಿಹಾರ ಸಾದರ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಕುಟುಂಬ ಮೂಲಗಳಂತೆ, ಮಗಳು ಮೋದಿ ಪರ ಹಾಡು ಹಾಡಿದ್ದರಿಂದ ಜನರು ಗೌರವ ನೀಡುತ್ತಿಲ್ಲ. ಗ್ರಾಮದ ಜನರು ಇವರ ಮೇಲೆ ಕೋಪಗೊಂಡಿದ್ದಾರೆ. ಕೆಲವರು ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ.

ಈ ಸಂಬಂಧ ಕತಿಹಾರ್​ ಬರಾರಿ ಪೊಲೀಸ್​ ಸ್ಟೇಷನ್​​ನಲ್ಲಿ ಅನಾಮಿಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details