ತಿರುಚ್ಚಿ: ಟಿಕ್ಟಾಕ್ ವಿಡಿಯೋ ಮೂಲಕ ಪ್ರಧಾನಿ ಮೋದಿಯನ್ನ ದೂಷಿಸಿದ್ದ ಮೂವರು ಬಾಲಕರನ್ನು ಬಂಧಿಸಿರುವ ಘಟನೆ ತಮಿಳುನಾಡಿನ ತಿರುಚ್ಚಿಯಲ್ಲಿ ನಡೆದಿದೆ.
ಕೊರೊನಾ ಕಾರ್ಯಾಚರಣೆ: ಟಿಕ್ಟಾಕ್ನಲ್ಲಿ ಮೋದಿ ನಿಂದಿಸಿದ ಮೂರು ಅಪ್ರಾಪ್ತರ ಬಂಧನ - defaming Tik Tok on PM Modi
ಕೊರೊನಾ ಸೋಂಕಿನ ವಿಚಾರದಲ್ಲಿ ಪ್ರಧಾನಿ ಮೋದಿಯನ್ನು ದೂಷಿಸಿ ಟಿಕ್ಟಾಕ್ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿದ್ದ ಬಾಲಕರನ್ನು ಬಂಧಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡು ಸಿಎಂ ಅವರನ್ನು ದೂಷಿಸುವ ಟಿಕ್ಟಾಕ್ ವಿಡಿಯೋಗಳು ಮತ್ತು ಟ್ರೋಲ್ಗಳ ಬಗ್ಗೆ ಬಿಜೆಪಿಯ ಕೆಲವು ಸದಸ್ಯರು ಪಾಲಕಾರೈ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಸಂಬಂದ ಟಿಕ್ಟಾಕ್ ವಿಡಿಯೋ ಮಾಡಿದ್ದ ಭೀಮನಗರ ಪ್ರದೇಶದ ಮೂವರು ಬಾಲಕರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವನ್ನು ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಧ್ಯವಾದಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಮಧ್ಯೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತೊಡಗಿರುವ ಯಾವುದೇ ವ್ಯಕ್ತಿಯನ್ನು ದೂಷಿಸುವ, ವದಂತಿಗಳನ್ನು ಹರಡುವ ಕೆಲಸ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಅಧಿಕಾರಿಗಳು ಎಚ್ಚರಿಸಿದ್ದಾರೆ.