ಕರ್ನಾಟಕ

karnataka

ETV Bharat / bharat

60 ವರ್ಷದ ಕಾಮುಕನಿಂದ ರೇಪ್​: ಮನೆ ಟೆರೆಸ್ ಮೇಲೆ ಮಗುವಿಗೆ ಜನ್ಮ ನೀಡಿದ ಅಪ್ರಾಪ್ತೆ! - 60 ವರ್ಷದ ಕಾಮುಕನಿಂದ ರೇಪ್

ಯಾರಿಗೂ ಗೊತ್ತಿಲ್ಲದ ರೀತಿಯಲ್ಲಿ ಅಪ್ರಾಪ್ತೆಯೊಬ್ಬಳು ಮನೆ ಟೆರೆಸ್ ಮೇಲೆ ನವಜಾತ ಶಿಶುವಿಗೆ ಜನ್ಮ ನೀಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

Minor rape victim
Minor rape victim

By

Published : Nov 5, 2020, 3:10 PM IST

ನವದೆಹಲಿ:ಕಳೆದ 9 ತಿಂಗಳ ಹಿಂದೆ 60 ವರ್ಷದ ಕಾಮುಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಅಪ್ರಾಪ್ತೆ ಇದೀಗ ನವಜಾತ ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಯಾರಿಗೂ ತಿಳಿಯದ ರೀತಿಯಲ್ಲಿ ಬಿಲ್ಡಿಂಗ್​ ಟೆರೆಸ್​ ಮೇಲೆ ಮಗುವಿಗೆ ಜನ್ಮ ನೀಡಿದ್ದು, ತದನಂತರ ಅದನ್ನ ಮನೆಯಿಂದ ಸ್ವಲ್ಪ ದೂರದ ಅಂಗಡಿವೊಂದರ ಮುಂದೆ ಬಿಟ್ಟು ಬಂದಿದ್ದಾಳೆ.

ಅಕ್ಟೋಬರ್​ 31ರಂದು ಈ ಘಟನೆ ನಡೆದಿದ್ದು, ಸ್ಥಳೀಯರ ಆಧಾರದ ಮೇಲೆ ಪೊಲೀಸರು ಸ್ಥಳಕ್ಕಾಗಮಿಸಿ, ನವಜಾತ ಶಿಶು ವಶಕ್ಕೆ ಪಡೆದುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಬಾಲಕಿ ಈ ಮಗುವಿಗೆ ಜನ್ಮ ನೀಡಿರುವುದು ಗೊತ್ತಾಗಿದೆ. ಇನ್ನು ಮಗು ಸಾವನ್ನಪ್ಪಿದೆಯಾ? ಅಥವಾ ಜೀವಂತವಾಗಿರುವುದೇ ಎಂಬುದರ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಾಗಿಲ್ಲ.

ಕಳೆದ 9 ತಿಂಗಳ ಹಿಂದೆ 60 ವರ್ಷದ ಕಾಮುಕನಿಂದ ಅತ್ಯಾಚಾರಕ್ಕೊಳಗಾಗಿದ್ದ ಬಾಲಕಿ ಘಟನೆ ಕುರಿತು ಯಾರಿಗೂ ಮಾಹಿತಿ ನೀಡಿಲ್ಲ. ಇದೀಗ ಮಗುವಿಗೆ ಜನ್ಮ ನೀಡಿ, ಹಾಳೆವೊಂದರಲ್ಲಿ ಸುತ್ತಿಕೊಂಡು ಹೋಗಿ ಬಿಟ್ಟು ಬಂದಿದ್ದಾಳೆ. ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ ಮಾಡುವಲ್ಲಿ ಈಗಾಗಲೇ ಪೊಲೀಸರು ಯಶಸ್ವಿಯಾಗಿದ್ದಾರೆ.

ABOUT THE AUTHOR

...view details