ಕರ್ನಾಟಕ

karnataka

ETV Bharat / bharat

ಮಧ್ಯಪ್ರದೇಶ: ಜಾಲತಾಣದಲ್ಲಿ ಪರಿಚಿತನಾದ ವ್ಯಕ್ತಿಯಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ - ಮಧ್ಯಪ್ರದೇಶ ಅಪ್ರಾಪ್ತೆ ಮೇಲೆ ಅತ್ಯಾಚಾರ ಸುದ್ದಿ

ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಮನೆಗೆ ಕರೆಯಿಸಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Bhopal
ಮಧ್ಯಪ್ರದೇಶ

By

Published : Jan 27, 2021, 12:27 PM IST

ಭೋಪಾಲ್ :ಅಪ್ರಾಪ್ತೆ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡಿದ್ದ ವ್ಯಕ್ತಿವೋರ್ವ ಆಕೆಯನ್ನು ಮನೆಗೆ ಕರೆಯಿಸಿ, ಬಳಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.

ಯುವರಾಜ್ ಬಂಧಿತ ಆರೋಪಿ. ಮೂಲತಃ ಬಿಹಾರ ಮೂಲದವರಾದ ಸಂತ್ರಸ್ತ ಬಾಲಕಿ ಕುಟುಂಬ, ಸದ್ಯ ಭೋಪಾಲ್‌ನ ಶಹಪುರದ ಎ-ಸೆಕ್ಟರ್‌ನಲ್ಲಿ ವಾಸಿಸುತ್ತಿದ್ದಾರೆ. ಯುವರಾಜ್​ ಸೋಶಿಯಲ್​ ಮೀಡಿಯಾ ಮೂಲಕ ಸಂತ್ರಸ್ತೆಯನ್ನು ಪರಿಚಯ ಮಾಡಿಕೊಂಡು ಮನೆಗೆ ಕರೆದಿದ್ದಾನೆ. ಆತನ ಮಾತನ್ನು ನಂಬಿ ತೆರಳಿದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಈ ಬಗ್ಗೆ ಮಾತನಾಡಿದ ಎಎಸ್​ಪಿ ರಾಜೇಶ್ ಸಿಂಗ್ ಭಡೋರಿಯಾ, "ಆರೋಪಿ ಅಪ್ರಾಪ್ತ ಬಾಲಕಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಸಂಪರ್ಕಿಸಿದ್ದಾನೆ. ಆತ ಬಾಲಕಿಯನ್ನು ತನ್ನ ನಿವಾಸಕ್ಕೆ ಕರೆದಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಸದ್ಯ ಸಂತ್ರಸ್ತೆಯ ಹೇಳಿಕೆಯ ಆಧಾರದ ಮೇರೆಗೆ ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 376ರಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ" ಎಂದಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಚಿವ ಪಿ ಸಿ ಶರ್ಮಾ ಮಾತನಾಡಿ, "ಇದು ದುರದೃಷ್ಟಕರ ಘಟನೆ ಮತ್ತು ಇಂತಹ ಅಪರಾಧಗಳನ್ನು ಮಾಡುವವರನ್ನು ಸಾರ್ವಜನಿಕ ಸ್ಥಳದಲ್ಲಿ ಗಲ್ಲಿಗೇರಿಸಬೇಕು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details