ನವದೆಹಲಿ: ದಕ್ಷಿಣ ದೆಹಲಿಯ ಕ್ಯಾರಂಟೈನ್ ಸೆಂಟರ್ನಲ್ಲಿ ದಾಖಲಾಗಿದ್ದ ವ್ಯಕ್ತಿಯೋರ್ವ ಅದೇ ಸೆಂಟರ್ನಲ್ಲಿ ದಾಖಲಾಗಿದ್ದ 16 ವರ್ಷದ ಬಾಲಕಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಕ್ವಾರಂಟೈನ್ ಸೆಂಟರ್ನಲ್ಲಿ ದಾಖಲಾಗಿದ್ದ 16ರ ಬಾಲಕಿ ಮೇಲೆ ಅತ್ಯಾಚಾರ - ಬಾಲಕಿ ಮೇಲೆ ಅತ್ಯಾಚಾರ
ದೆಹಲಿಯ ಕ್ಯಾರಂಟೈನ್ ಸೆಂಟರ್ನಲ್ಲಿ ದಾಖಲಾಗಿದ್ದ ಅಪ್ರಾಪ್ತ ಬಾಲಕಿಯೋರ್ವಳನ್ನು, ಅದೇ ಕೇಂದ್ರದಲ್ಲಿದ್ದ ವ್ಯಕ್ತಿಯೋರ್ವ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.
![ಕ್ವಾರಂಟೈನ್ ಸೆಂಟರ್ನಲ್ಲಿ ದಾಖಲಾಗಿದ್ದ 16ರ ಬಾಲಕಿ ಮೇಲೆ ಅತ್ಯಾಚಾರ Minor girl raped](https://etvbharatimages.akamaized.net/etvbharat/prod-images/768-512-8143886-thumbnail-3x2-news.jpg)
ಬಾಲಕಿ ಮೇಲೆ ಅತ್ಯಾಚಾರ
ದೆಹಲಿಯ ದಕ್ಷಿಣ ಭಾಗದ ಕೋವಿಡ್-19 ಕೇಂದ್ರದಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಅತ್ಯಾಚಾರವೆಸಗಿದ ಆರೋಪಿ ಕೊರೊನಾ ಸೋಂಕಿಗೆ ಒಳಗಾಗಿದ್ದಾನೆಯೇ ಎಂಬುದು ಖಚಿತವಾಗಿಲ್ಲ. ಇನ್ನು ದಕ್ಷಿಣ ದೆಹಲಿಯ ಹೆಚ್ಚುವರಿ ಡಿಸಿಪಿ ಪರ್ವಿಂದರ್ ಸಿಂಗ್ ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಆರೋಪಿಯ ವರದಿ ಬಂದ ನಂತರ ಅದನ್ನು ಪರಿಶೀಲಿಸಿ ಆತನನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಘಟನೆಯ ನಂತರ ಸಂತ್ರಸ್ತೆಯನ್ನು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕೋವಿಡ್-19 ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.