ನುಹಾ( ಹರಿಯಾಣ):ಬಾಲಕಿ ಮೇಲೆ ಗ್ಯಾಂಗ್ರೇಪ್ ನಡೆದ ಕೆಲವೇ ಗಂಟೆಗಳಲ್ಲಿ ಮತ್ತೆ ಗ್ಯಾಂಗ್ರೇಪ್ ನಡೆದಿರುವ ಘಟನೆ ಜುಲೈ 30ಕ್ಕೆ ದೆಹಲಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನುಹಾ ಜಿಲ್ಲೆ ಪುನ್ಹಾನ ವ್ಯಾಪ್ತಿಯ 15 ವರ್ಷದ ಬಾಲಕಿಯನ್ನು ಸ್ಥಳೀಯ ನಿವಾಸಿಯ ಐವರು ಯುವಕರು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ಐವರು ಕಿರಾತಕರು ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಯಾರಿಗೂ ಹೇಳದಂತೆ ಗನ್ ತೋರಿಸಿ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ.