ಕರ್ನಾಟಕ

karnataka

ETV Bharat / bharat

ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆ ಸ್ಥಿತಿ ಗಂಭೀರ... ಆರೋಪಿ ಬಂಧನ - ಅತ್ಯಾಚಾರಕ್ಕೊಳಗಾಗದ ಅಪ್ರಾಪ್ತೆ ಸ್ಥಿತಿ ಗಂಭೀರ

ಅಪ್ರಾಪ್ತೆ ಮೇಲೆ ಚಿಕ್ಕಪ್ಪ ಹಾಗೂ ಆತನ ಸ್ನೇಹಿತ ಸೇರಿ ಸಾಮೂಹಿಕ ಅತ್ಯಾಚಾರವೆಸಗಿದ್ದು, ಇದರಿಂದ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Rape case Madhya Pradesh
Rape case Madhya Pradesh

By

Published : Oct 13, 2020, 7:30 PM IST

Updated : Oct 13, 2020, 7:36 PM IST

ರೇವಾ(ಮಧ್ಯಪ್ರದೇಶ):ಅಪ್ರಾಪ್ತೆವೋರ್ವಳು ಚಿಕ್ಕಪ್ಪ ಹಾಗೂ ಆತನ ಸ್ನೇಹಿತನಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆರೋಪಿಯ ಬಂಧನ ಮಾಡಿರುವ ಪೊಲೀಸರು, ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.16 ವರ್ಷದ ಬಾಲಕಿ ಅಕ್ಟೋಬರ್​ 8ರಂದು ಸಂಜೆ ಸಮಯ ಬರ್ತಡೇ ಪಾರ್ಟಿ ಮುಗಿಸಿಕೊಂಡು ಮನೆಗೆ ಬರುತ್ತಿದ್ದ ವೇಳೆ ಅಪಹರಣ ಮಾಡಿ ಅತ್ಯಾಚಾರವೆಸಗಿದ್ದಾರೆ. ಈ ವೇಳೆ ಆಕೆಗೆ ಚಾಕುವಿನಿಂದ ಬೆದರಿಕೆ ಹಾಕಿ, ಕೃತ್ಯದ ಬಗ್ಗೆ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡುವುದಾಗಿ ಹೆದರಿಸಿದ್ದಾರೆ.

ಸಂಜಯ ಗಾಂಧಿ ಮೆಮೋರಿಯಲ್​ ಆಸ್ಪತ್ರೆ

ಮನೆಗೆ ಬಂದಾಗ ತೀವ್ರ ರಕ್ತಸ್ರಾವ ಆಗುತ್ತಿರುವುದನ್ನ ನೋಡಿರುವ ಕುಟುಂಬಸ್ಥರು ತಕ್ಷಣವೇ ಸಂಜಯ ಗಾಂಧಿ ಮೆಮೋರಿಯಲ್​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವೈದ್ಯರು ಪ್ರಕಾರ ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಪ್ರಕರಣದನ್ವಯ ಈಗಾಗಲೇ ಅಕಿಂತ್ ಎಂಬ ವ್ಯಕ್ತಿಯ ಬಂಧನ ಮಾಡಲಾಗಿದೆ. ಆದರೆ ಪ್ರಮುಖ ಆರೋಪಿ ವನಸ್ಪತಿ ಪರಾರಿಯಾಗಿದ್ದು, ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ಬಾಲಕಿ ತಿಳಿಸಿರುವ ಪ್ರಕಾರ ನಿರ್ಜನ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದು, ಈ ವೇಳೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದಿದ್ದಾಳೆ. ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.

Last Updated : Oct 13, 2020, 7:36 PM IST

ABOUT THE AUTHOR

...view details