ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ದೇಶಾದ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ 19 ತಡೆಗಟ್ಟುವ ದೃಷ್ಠಿಯಿಂದ ಶಾಲೆಗಳಿಗೆ ಕೆಲವು ಸಲಹೆಗಳನ್ನು ನೀಡಿದೆ.
ಕೋವಿಡ್ 19: ಆರೋಗ್ಯ & ಕುಟುಂಬ ಕಲ್ಯಾಣ ಸಚಿವಾಲಯದಿಂದ ಶಾಲೆಗಳಿಗೆ ಉಪಯುಕ್ತ ಸಲಹೆ - ದೇಶದ್ಯಂತ ಕೊರೊನಾ ಭೀತಿ
ಪ್ರಪಂಚಾದ್ಯಂತ ಭೀತಿ ಹುಟ್ಟಿಸಿರುವ ಡೆಡ್ಲಿ ಕೊರೊನಾ ವೈರಸ್ ಇದೀಗ ಇದೀಗ ಭಾರತಕ್ಕೂ ಕಾಲಿಟ್ಟಿದೆ. ಈ ಹಿನ್ನೆಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕೋವಿಡ್ 19 ತಡೆಗಟ್ಟುವ ದೃಷ್ಠಿಯಿಂದ ಶಾಲೆಗಳಿಗೆ ಕೆಲವು ಅಗತ್ಯ ಸಲಹೆಗಳನ್ನು ನೀಡಿದೆ.
ದೇಶದ್ಯಂತ ಕೊರೊನಾ ಭೀತಿ
ಶಾಲೆಯಲ್ಲಿ ಯಾವುದೇ ದೊಡ್ಡ ಮಟ್ಟದ ಸಭೆ ಹಾಗೂ ಸಮಾರಂಭಗಳನ್ನು ನಡೆಸದಂತೆ ಸೂಚಿಸಲಾಗಿದೆ ಹಾಗೂ ಕೊರೊನಾ ಹರಡಿದ್ದ ದೇಶಗಳಿಗೆ ಇತ್ತೀಚಿನ 28 ದಿನಗಳಲ್ಲಿ ಯಾರಾದ್ರೂ ಹೋಗಿದ್ದರೆ, ಅವರು 14 ದಿನಗಳ ಕಾಲ ಶಾಲೆಗೆ ಬರದಂತೆ ನಿಗಾ ವಹಿಸಲು ಹೇಳಲಾಗಿದೆ. ವಿದ್ಯಾರ್ಥಿಗಳಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಬೇಕು ಎಂದು ಹೇಳಿದೆ.
ಇನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕೂಡ ಕೊರೊನಾ ವೈರಸ್ ಬಗ್ಗೆ ಜಾಗ್ರತೆಯಿಂದಿರಲು ಶಾಲೆಗಳಿಗೆ ಕೆಲವು ಉಪಯುಕ್ತ ಸಲಹೆಗಳನ್ನು ನೀಡಿದೆ.