ನವದೆಹಲಿ:ಕೋವಿಡ್-19 ತಡೆಗಟ್ಟಲು ಹೇರಲಾಗಿದ್ದ ನಿರ್ಬಂಧದ ವೇಳೆ ನಾಗರಿಕ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದರಿಂದ ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದವರು ತಮ್ಮ ಹಣ ವಾಪಸ್ ಬರುತ್ತೋ ಇಲ್ಲವೋ ಎಂಬ ಚಿಂತೆಯಲ್ಲಿದ್ದರು. ಸದ್ಯ ವಿಮಾನ ಸಂಸ್ಥೆಗಳು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದವರಿಗೆ ಹಣ ವಾಪಸ್ ನೀಡಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಮುಂಗಡ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ದವರ ಹಣ ವಾಪಸ್: ನಾಗರಿಕ ವಿಮಾನ ಸಚಿವಾಲಯ - ಮುಂಗಡ ವಿಮಾನ ಟಿಕೆಟ್ ಬುಕ್ ಮಾಡಿದ್ದವರ ಹಣ ವಾಪಸ್
ಕೊರೊನಾ ನಿಯಂತ್ರಣದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿತ್ತು. ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದವರು ತಮ್ಮ ಹಣ ವಾಪಸ್ ಬರುತ್ತೋ ಇಲ್ಲವೋ ಎಂಬ ಚಿಂತನೆಯಲ್ಲಿದ್ದರು. ಸದ್ಯ ವಿಮಾನ ಸಂಸ್ಥೆಗಳು ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದವರಿಗೆ ಹಣ ವಾಪಸ್ ನೀಡಲಿವೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಈ ಬಗ್ಗೆ ಸಚಿವಾಲಯ ಆದೇಶ ಹೊರಡಿಸಿದ್ದು, ಮೊದಲ ಲಾಕ್‌ಡೌನ್ (ಮಾರ್ಚ್ 25 ರಿಂದ ಏಪ್ರಿಲ್ 14) ಅವಧಿಗೆ ಬುಕ್ ಮಾಡಲಾಗಿದ್ದ ಪ್ರಯಾಣಿಕರಿಗೆ ಆಯಾ ಸಂಸ್ಥೆಗಳು ಸಂಪೂರ್ಣ ಹಣವನ್ನು ವಾಪಸ್ ನೀಡುತ್ತಿವೆ. ಟಿಕೆಟ್ ರದ್ದು ಮಾಡುವಂತೆ ಮನವಿಗಳನ್ನು ಸ್ವೀಕರಿಸಿದ ಮೂರು ವಾರಗಳೊಳಗಾಗಿ ಹಣ ಖಾತೆಗೆ ಜಮೆಯಾಗಲಿದೆ. ಟಿಕೆಟ್ ರದ್ದು ಮಾಡಿದ ಶುಲ್ಕವನ್ನು ಸಹ ಪಡೆಯುವುದಿಲ್ಲ. ಇದು ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸೇವೆಗಳಿಗೆ ಅನ್ವಯಿಸಲಿದೆ. ಹಣ ಪಡೆಯುವ ಸಂಬಂಧ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ.
ಮುಂಗಡವಾಗಿ ಟಿಕೆಟ್ ಬುಕ್ ಮಾಡಿದ್ದವರಿಗೆ ಯಾವುದೇ ಕಾರಣಕ್ಕೂ ಹಣ ವಾಪಸ್ ನೀಡುವುದಿಲ್ಲ. ಬದಲಾಗಿ ಲಾಕ್‌ಡೌನ್ ತೆರವಾದ ನಂತರದ ದಿನಗಳಲ್ಲಿ ಪ್ರಯಾಣಿಕರಿಗೆ ವಿಮಾನ ಸೇವೆಯನ್ನು ನೀಡುವುದಾಗಿ ವಿಮಾನಯಾನ ಸಂಸ್ಥೆಗಳು ಹೇಳಿದ್ದವು.