ಕರ್ನಾಟಕ

karnataka

ETV Bharat / bharat

10 ಪ್ರದೇಶ ಹಾಗೂ 10 ನಿರ್ಧಾರದ ಬಗ್ಗೆ ಕಾರ್ಯಯೋಜನೆ ಸಿದ್ಧಪಡಿಸಿ.. ಕೇಂದ್ರ ಸಚಿವರಿಗೆ ಪಿಎಂ ಸೂಚನೆ - ಮೋದಿ

ಲಾಕ್​ಡೌನ್ ಹಾಗೂ ಸಾಮಾಜಿಕ ಅಂತರ ಜೊತೆಜೊತೆಯಾಗಿ ಸಾಗಬೇಕು ಎಂದಿರುವ ಅವರು, ಲಾಕ್​ಡೌನ್​ ಕೊನೆಗೊಂಡ ಮೇಲೆ ಏನೇನು ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ 10 ನಿರ್ಧಾರಗಳು ಹಾಗೂ ನಿಗಾದಲ್ಲಿಡಬೇಕಾದ 10 ಪ್ರದೇಶಗಳ ಪಟ್ಟಿ ಸಿದ್ಧಪಡಿಸುವಂತೆ ಮನವಿ ಮಾಡಿದರು.

pm modi
ಪ್ರಧಾನಿ ಮೋದಿ

By

Published : Apr 6, 2020, 4:54 PM IST

ನವದೆಹಲಿ :ಕೊರೊನಾ ಮಹಾಮಾರಿ ತೀವ್ರವಾಗಿ ಹರಡುತ್ತಿರುವ ಈ ವೇಳೆ ಎಲ್ಲಾ ಕೇಂದ್ರ ಸಚಿವರು ಅವರವರ ರಾಜ್ಯಗಳೊಂದಿಗೆ ಹಾಗೂ ಜಿಲ್ಲಾಡಳಿತಗಳೊಂದಿಗೆ ಸದಾ ಸಂಪರ್ಕದಲ್ಲಿರಬೇಕೆಂದು ಪ್ರಧಾನಿ ಮೋದಿ ಸೂಚಿಸಿದ್ದಾರೆ.

ಕೊರೊನಾ ಹರಡದಂತೆ ತಡೆಯಲು ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ಸಚಿವರೊಂದಿಗೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಿದ ಅವರು, ಕೊರೊನಾ ಕುರಿತಂತೆ ಉದ್ಭವಿಸುವ ಸಮಸ್ಯೆಗಳಿಗೆ ತಕ್ಷಣವೇ ಪರಿಹಾರ ಒದಗಿಸಬೇಕು. ಇದಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಣ್ಣ ಯೋಜನೆಗಳನ್ನು ರೂಪಿಸಬೇಕೆಂದು ಆದೇಶಿಸಿದರು.

ಲಾಕ್​ಡೌನ್ ಹಾಗೂ ಸಾಮಾಜಿಕ ಅಂತರ ಜೊತೆಜೊತೆಯಾಗಿ ಸಾಗಬೇಕು ಎಂದಿರುವ ಅವರು, ಲಾಕ್​ಡೌನ್​ ಕೊನೆಗೊಂಡ ಮೇಲೆ ಏನೇನು ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆ 10 ನಿರ್ಧಾರಗಳು ಹಾಗೂ ನಿಗಾದಲ್ಲಿಡಬೇಕಾದ 10 ಪ್ರದೇಶಗಳ ಪಟ್ಟಿ ಸಿದ್ಧಪಡಿಸುವಂತೆ ಮನವಿ ಮಾಡಿದರು.

ಕೊರೊನಾ ಸಮರದಲ್ಲಿ ಕೇಂದ್ರ ಸಚಿವರು ನಾಯಕತ್ವವಹಿಸಿಕೊಳ್ಳುತ್ತಿರುವುದಕ್ಕೆ ಶ್ಲಾಘಿಸಿದರು. ನಿರಂತರವಾಗಿ ಮಾಹಿತಿ ಕೊಡುವಂತೆ ಮನವಿ ಮಾಡಿದರು. ರೈತರಿಗೆ ಬೇರೆ ಬೇರೆ ತಂತ್ರಜ್ಞಾನದ ಮೂಲಕ ಬಿತ್ತನೆ ವೇಳೆಯಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ.

ABOUT THE AUTHOR

...view details