ಅಮರಾವತಿ(ಮಹಾರಾಷ್ಟ್ರ): ಅಪ್ರಾಪ್ತ ಯುವತಿಯನ್ನು ಯುವಕನೋರ್ವ ಚಾಕುವಿನಿಂದ ಚುಚ್ಚಿ ಕ್ರೂರವಾಗಿ ಕೊಂದಿರುವ ಘಟನೆ ಮಹಾರಾಷ್ಟ್ರದ ಅಮರಾವತಿ ಪಟ್ಟಣದಲ್ಲಿ ನಡೆದಿದೆ.
ಅಪ್ರಾಪ್ತೆಗೆ ಚಾಕುವಿನಿಂದ ಚುಚ್ಚಿ ಚುಚ್ಚಿ ಕೊಂದ ಯುವಕ! ಬಳಿಕ ತಾನೂ ಆತ್ಮಹತ್ಯೆಗೆ ಯತ್ನ - ಮಹಾರಾಷ್ಟ್ರ ಅಪರಾಧ ಸುದ್ದಿ
ಅಪ್ರಾಪ್ತ ಯುವತಿಯನ್ನು ಯುವಕನೊಬ್ಬ ಚಾಕುವಿನಿಂದ ಚುಚ್ಚಿ ಕ್ರೂರವಾಗಿ ಕೊಂದಿರುವ ಘಟನೆ ಮಹಾರಾಷ್ಟ್ರದದಲ್ಲಿ ನಡೆದಿದೆ. ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಧಮ್ನಾಗಾಂವ್ನಲ್ಲಿ ಘಟನೆ ನಡೆದಿದ್ದು, ಪ್ರೀತಿ ವಿಚಾರವಾಗಿ ಈ ಕೊಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಯುವತಿಗೆ ಚೂರಿ ಇರಿದ ಬಳಿಕ, ಯವಕ ಸಾಗರ್ ತಾನೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಘಟನೆಯಲ್ಲಿ ಯುವತಿ ಸಾವನ್ನಪ್ಪಿದ್ದು, ಸ್ಥಳೀಯರ ಸಹಾಯದಿಂದ ಯುವಕನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿ 17 ವರ್ಷದವಳಾಗಿದ್ದು, 12 ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ಪ್ರೀತಿ ವಿಚಾರಕ್ಕೆ ಕೊಲೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಹಾಜರಾಗಿ ಪರಿಶೀಲನೆ ನಡೆಸಿದ್ದಾರೆ.