ಕರ್ನಾಟಕ

karnataka

ETV Bharat / bharat

ಭಾರತದ ಮೊದಲ 'ಕೋವಿಡ್​-19 ಟೆಸ್ಟಿಂಗ್​ ಕಿಟ್'​ ತಯಾರಿಸಿ ಬಳಿಕ ಮಗುವಿಗೆ ಜನ್ಮ ನೀಡಿದ ವೈದ್ಯೆ

ತುಂಬು ಗರ್ಭಿಣಿ ವೈದ್ಯೆಯೊಬ್ಬರು ಭಾರತದ ಮೊದಲ 'ಕೋವಿಡ್​-19 ಟೆಸ್ಟಿಂಗ್​ ಕಿಟ್'​ ಸಿದ್ಧಪಡಿಸಿ, ಅದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ತಲುಪಿಸಿದ ಒಂದು ದಿನದ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ.

Minal Dakhave Bhosale
ಡಾ.ಮಿನಾಲ್​ ದಾಖ್ವೆ ಭೋಸ್ಲೆ

By

Published : Mar 29, 2020, 9:14 PM IST

ಪುಣೆ: ಮಹಾರಾಷ್ಟ್ರದ ಪುಣೆಯ ಮೈ ಲಾಬ್ ಡಿಸ್ಕವರಿ ಕಂಪನಿಯು ಕೊರೊನಾ ಟೆಸ್ಟಿಂಗ್​ ಕಿಟ್​​ಗಳನ್ನು ತಯಾರಿಸಲು ಮತ್ತು ಮಾರಾಟ ಮಾಡಲು ಸಂಪೂರ್ಣ ಅನುಮೋದನೆ ಪಡೆದ ಮೊದಲ ಭಾರತೀಯ ಸಂಸ್ಥೆಯಾಗಿ ಹೊರಮೊಮ್ಮಿದ್ದು, ಇದರ ಕ್ರೆಡಿಟ್​ ಓರ್ವ ತುಂಬು ಗರ್ಭಿಣಿಗೆ ಸಲ್ಲುತ್ತದೆ.

ಆಣ್ವಿಕ ರೋಗನಿರ್ಣಯ ಕಂಪನಿಯಾದ ಮೈ ಲಾಬ್ ಡಿಸ್ಕವರಿಯ ವೈರಾಲಜಿಸ್ಟ್ ಡಾ.ಮಿನಾಲ್​ ದಾಖ್ವೆ ಭೋಸ್ಲೆ, ಭಾರತದಲ್ಲಿ ಮೊದಲ ಕೋವಿಡ್​-19 ಟೆಸ್ಟಿಂಗ್​ ಕಿಟ್ ತಯಾರಿಸಿದ ಮಹಿಳೆಯಾಗಿದ್ದಾರೆ. ಈ ಕಿಟ್​ನ ಹೆಸರು 'ಪ್ಯಾಥೋ ಡಿಟೆಕ್ಟ್​'​ ಆಗಿದ್ದು, ಇದು ಒಂದೇ ಬಾರಿಗೆ ನೂರು ಮಾದರಿಗಳನ್ನು ಪರೀಕ್ಷಿಸಲಿದ್ದು, ಇದರ ಬೆಲೆ ಕೇವಲ 1,200 ರೂ ಆಗಿದೆ. ಚೀನಾದ ಕಿಟ್​ಗೆ ಈವರೆಗೆ 4,500 ರೂ. ನೀಡಬೇಕಿತ್ತು. ಕೇವಲ ಆರು ವಾರಗಳಲ್ಲಿ ಮಿನಾಲ್​ ನೇತೃತ್ವದ 10 ಜನರ ಸಂಶೋಧನಾ ತಂಡವು ಕಿಟ್​ ಅನ್ನು ಕಂಡುಹಿಡಿದಿದ್ದಾರೆ.

ಇನ್ನೊಂದು ಗಮನಿಸಬೇಕಾದ ವಿಷಯವೆಂದರೆ, ತುಂಬು ಗರ್ಭಿಣಿಯಾಗಿದ್ದ ಮಿನಾಲ್, ಸಂಪೂರ್ಣವಾಗಿ ಕಿಟ್​ ಅನ್ನು ಸಿದ್ಧಪಡಿಸಿ, ಅದನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ತಲುಪಿಸಿದ ಒಂದು ದಿನದ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಿನಾಲ್​ ದಾಖ್ವೆ, ಇದೊಂದು ತುರ್ತು ಪರಿಸ್ಥಿತಿಯಾಗಿದ್ದು, ಭಾರತದಲ್ಲಿ ಕೊರೊನಾ ಟೆಸ್ಟಿಂಗ್​ ಕಿಟ್​ ಅನಿವಾರ್ಯವಿತ್ತು. ನನ್ನ ದೇಶಕ್ಕಾಗಿ ಏನಾದರೂ ಸೇವೆ ಸಲ್ಲಿಸಬೇಕೆಂದು ಇದನ್ನ ಸವಾಲಾಗಿ ಸ್ವೀಕರಿಸಿದೆ. ಬೇರೆ ಟೆಸ್ಟಿಂಗ್​ ಕಿಟ್​​ಗಳು ಕೊರೊನಾ ಪರೀಕ್ಷೆಗೆ 6-7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಆದರೆ ನಾವು ಸಿದ್ಧಪಡಿಸಿರುವ ಕಿಟ್​ ಕೇವಲ ಎರಡುವರೆ ಗಂಟೆಯಲ್ಲಿ ಫಲಿತಾಂಶ ನೀಡುತ್ತದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details