ವಿಜಯವಾಡ(ಆಂಧ್ರಪ್ರದೇಶ):ಅದು ಅಲ್ಪ ಪ್ರಮಾಣದ ನೀರಿನ ಸಂಪನ್ಮೂಲಗಳನ್ನು ಹೊಂದಿರುವ ಪ್ರದೇಶ. ಅಲ್ಲಿ ಹನಿ ಹಾಗೂ ತುಂತುರು ನೀರಾವರಿ ಕೃಷಿಗೆ ಜೀವಾಧಾರ. ಅಂತಹ ಪ್ರದೇಶದಲ್ಲಿ ರಾಗಿ ಮತ್ತು ಏಕದಳ ಬೆಳೆಗಳನ್ನು ಬೆಳೆಯಲು ಒಂದು ಸಂಸ್ಥೆ ರೈತರನ್ನು ಉತ್ತೇಜಿಸುತ್ತಿದೆ.
ಅದು ಗ್ರಾಮದ ಎಲ್ಲ ರೈತರನ್ನು ಒಂದುಗೂಡಿಸಿ, ಕಡಿಮೆ ನೀರಿನ ಸಂಗ್ರಹದೊಂದಿಗೆ ಆಹಾರ ಬೆಳೆಗಳನ್ನು ಬೆಳೆಸಲು ಪ್ರೇರೇಪಿಸುತ್ತದೆ. ಆ ಕಂಪನಿಯೇ ಎಂ.ಕೆ.ಪುರಂ ರಾಗಿ ಬ್ಯಾಂಕ್.
ಚಿತ್ತೂರು ಜಿಲ್ಲೆಯ ಕುಪ್ಪಂ ಬಳಿಯ ಎಂ.ಕೆ.ಪುರಂನಲ್ಲಿ, ರಾಗಿ ಬ್ಯಾಂಕ್ ಇದೆ. ಅದೇ ಗ್ರಾಮದ ಶ್ರೀಮತಿ ವಿಶಾಲಾ ರೆಡ್ಡಿಯವರು, ಈ ಬ್ಯಾಂಕ್ ಅನ್ನು ಸ್ಥಾಪಿಸಿದ್ದಾರೆ. ಹೈದರಾಬಾದ್ ಮೂಲದವರಾದ ವಿಶಾಲಾ, ಉದ್ಯಮಿಗಳಿಗೆ ತರಬೇತಿ ನೀಡುತ್ತಿದ್ದರು. ಇದೀಗ ರೈತರಿಗೆ ಬೆಂಬಲ ನೀಡುವ ಉದ್ದೇಶದಿಂದ, ತಮ್ಮ ಊರಿಗೆ ವಾಪಸ್ ಮರಳಿದ್ದಾರೆ.
ಆಂಧ್ರ ಪ್ರದೇಶದ ರಾಗಿ ಬ್ಯಾಂಕ್ ಒಂದು ಕಾಲದಲ್ಲಿ ಫಾಕ್ಸ್ಟೈಲ್, ಲಿಟಲ್ ಕೊಡೊ, ಮತ್ತು ಬಾರ್ನ್ಯಾರ್ಡ್ ಪ್ರಭೇದದ ರಾಗಿಗಳನ್ನು ಬೆಳೆಸಿದ ಎಲ್ಲ ರೈತರು, ಕ್ರಮೇಣ ವಾಣಿಜ್ಯ ಬೆಳೆಗಳತ್ತ ಗಮನ ಹರಿಸ ತೊಡಗಿದ್ದರು. ಇದನ್ನು ಮನಗಂಡ ವಿಶಾಲಾ ಅವರು ರಾಗಿ ಬ್ಯಾಂಕ್ ಸ್ಥಾಪಿಸಿದ್ದಾರೆ.
ಅಲ್ಲಿನ ರಾಗಿ ಬ್ಯಾಂಕ್ ವ್ಯವಸ್ಥಾಪಕರು 50 ರೈತರಿಗೆ ಸಿರಿಧಾನ್ಯಗಳನ್ನು ಬೆಳೆಯಲು ಮನವೊಲಿಸಿದ್ದಾರೆ. ಹಾಗೂ ಅನುಭವಿ ರೈತರು ತಮ್ಮ ಕೌಶಲ್ಯಗಳನ್ನು ಯುವ ರೈತರೊಂದಿಗೆ ಹಂಚಿಕೊಂಡು ಕೃಷಿಗೆ ಪ್ರೋತ್ಸಾಹಿಸುತ್ತಿದ್ದಾರೆ. ಮುಖ್ಯವಾಗಿ ಸಾವಯವ ವಿಧಾನಗಳ ಮೂಲಕ ಸಿರಿಧಾನ್ಯಗಳನ್ನು ಬೆಳೆದು ಲಾಭ ಗಳಿಸಲು, ಕೃಷಿ ಅಧಿಕಾರಿಗಳ ಸಲಹೆಯನ್ನು ರವಾನಿಸುತ್ತಿದ್ದಾರೆ. ಈ ರೀತಿಯಾಗಿ ರೈತ ಸಮುದಾಯಕ್ಕೆ ಈ ಬ್ಯಾಂಕ್ ಸಹಕಾರ ನೀಡುತ್ತಿದೆ.
ಪ್ರಸ್ತುತ ಸುಮಾರು 25 ಎಕರೆ ಪ್ರದೇಶದಲ್ಲಿ ರಾಗಿಯನ್ನು ಪ್ರಾಯೋಗಿಕ ಆಧಾರದ ಮೇಲೆ ಬೆಳೆಯಲಾಗುತ್ತಿದೆ. ಉತ್ಪಾದಕರ ಸಂಘದಲ್ಲಿ ರೈತರಿಗೆ ಸದಸ್ಯತ್ವ ನೀಡಲು ಮತ್ತು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅನುವು ಮಾಡಿಕೊಡಲು ಈ ಬ್ಯಾಂಕ್ ಯೋಜಿಸಿದೆ. ವೈವಿಧ್ಯಮಯ ಪರಿಕರಗಳು ಮತ್ತು ಬೀಜಗಳು ಪ್ರದರ್ಶನದಲ್ಲಿದ್ದು, ಜಾಗೃತಿ ಮೂಡಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ವಿಶಾಲಾ ರೆಡ್ಡಿಯವರು ರಾಗಿ ಬ್ಯಾಂಕ್ ಸ್ಥಾಪಿಸುವ ಮೂಲಕ, ರೈತರಿಗೆ ಬೆಂಬಲಿಗರಾಗಿದ್ದಾರೆ. ಸಾಂಪ್ರದಾಯಿಕ ವಿಧಾನಗಳ ಮೂಲಕ, ರಾಗಿ ಕೃಷಿಯಿಂದ ದಾರಿ ತಪ್ಪಿದ ರೈತರನ್ನು ಒಟ್ಟುಗೂಡಿಸುವ ಕೆಲಸ ಮಾಡುತ್ತಿದ್ದಾರೆ.