ನವದೆಹಲಿ: ಕಳೆದ ವರ್ಷ ಫೆಬ್ರವರಿ 27ರಂದು ವಾಯುಪಡೆಯ ಎಂಐ- 17 ಹೆಲಿಕಾಪ್ಟರ್ ಪತನ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳ ವಿರುದ್ಧದ ಕಾನೂನು ಕ್ರಮಕ್ಕೆ ಸಶಸ್ತ್ರ ಪಡೆಗಳ ನ್ಯಾಯಾಲಯ ತಡೆ ನೀಡಿದೆ.
ಜಮ್ಮು-ಕಾಶ್ಮೀರದ ಬದ್ಗಾಂನಲ್ಲಿ ಈ ಘಟನೆ ನಡೆದಿದ್ದು, ಹೆಲಿಕಾಪ್ಟರ್ನಲ್ಲಿದ್ದ ಆರು ಮಂದಿ ವಾಯುಪಡೆ ಅಧಿಕಾರಿಗಳು ಹಾಗೂ ಓರ್ವ ನಾಗರಿಕ ಸಾವನ್ನಪ್ಪಿದ್ದು, ಈ ಕುರಿತಂತೆ ಮಿಲಿಟರಿ ನ್ಯಾಯಾಲಯ ಸೋಮವಾರ ಈ ರೀತಿಯಾಗಿ ಆದೇಶ ನೀಡಿದೆ.
ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಎಸ್.ಆರ್. ಚೌಧರಿ ಹಾಗೂ ವಿಂಗ್ ಕಮಾಂಡರ್ ಶ್ಯಾಮ್ ನೈತಾನಿ ಅವರ ವಿರುದ್ಧ ಕ್ರಮ ಜರುಗಲಿದ್ದು, ಇಬ್ಬರೂ ಅಧಿಕಾರಿಗಳ ಪರ ವಕೀಲ ಅಂಕುರ್ ಚಿಬ್ಬಾರ್ ವಾದ ಮಂಡಿಸಿದ್ದರು.