ಕರ್ನಾಟಕ

karnataka

ETV Bharat / bharat

ಮದರಸಾದಲ್ಲಿದ್ದ ಭಯೋತ್ಪಾದಕನ ಸೆರೆಹಿಡಿದ ಸೇನಾಪಡೆ - ಭಾರತೀಯ ಸೇನಾ ಪಡೆಯಿಂದ ಕಾರ್ಯಾಚರಣೆ

ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಓರ್ವ ಭಯೋತ್ಪಾದಕನನ್ನು ಸೇನಾ ಪಡೆ ಬಂಧಿಸಿದೆ ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.

Militant arrested
ಉಗ್ರನ ಸೆರೆ

By

Published : Nov 22, 2020, 7:17 PM IST

ಶ್ರೀನಗರ (ಜಮ್ಮು ಕಾಶ್ಮೀರ): ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದ ವೇಳೆ ಪುಲ್ವಾಮಾ ಜಿಲ್ಲೆಯಲ್ಲಿ ಮದರಸಾವೊಂದರಲ್ಲಿ ಓರ್ವ ಭಯೋತ್ಪಾದಕನನ್ನು ಬಂಧಿಸಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.

ಚತ್ಪುರ ಮೊಹಲ್ಲಾ ಪ್ರದೇಶದಲ್ಲಿ ಸೇನಾ ಪಡೆಗಳು ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದವು. ನಿಖರ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಸೇನೆ ಕುಪ್ವಾರ ಜಿಲ್ಲೆಯ ಹಂದ್ವಾರ ಮೂಲದ ಭಯೋತ್ಪಾದಕನನ್ನು ಬಂಧಿಸಿದೆ.

ಸೆರೆಯಾದವನು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಕ್ರಿಯನಾಗಿದ್ದು, ಇದೇ ಪ್ರದೇಶದಲ್ಲಿ ವ್ಯಕ್ತಿಯೋರ್ವನನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಮದರಸಾದಲ್ಲಿ ಭಯೋತ್ಪಾದಕನಿರುವುದಾಗಿ ಬಾಯ್ಬಿಟ್ಟಿದ್ದನು ಎಂದು ಎಂದು ಸೇನೆಯ ಉನ್ನತ ಮೂಲಗಳು ತಿಳಿಸಿವೆ.

ABOUT THE AUTHOR

...view details