ಕರ್ನಾಟಕ

karnataka

ETV Bharat / bharat

ಭದ್ರತಾ ಪಡೆಯ ಮೇಲೆ ಶಂಕಿತ ಉಗ್ರರಿಂದ ದಾಳಿ: ಓರ್ವ ಸೈನಿಕ ಹುತಾತ್ಮ - ನಾಲ್ವರು ಸೈನಿಕರಿಗೆ ಗಾಯ

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಶಮ್ಸಿಪೋರಾ ಪ್ರದೇಶದಲ್ಲಿ ಸೇನೆಯ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ ಪರಿಣಾಮ ನಾಲ್ವರು ಸೈನಿಕರು ಗಾಯಗೊಂಡಿದ್ದರು. ಇವರಲ್ಲಿ ಒಬ್ಬರು ಹುತಾತ್ಮರಾಗಿದ್ದಾರೆ.

ಭದ್ರತಾ ಪಡೆಗಳ ಮೇಲೆ ಶಂಕಿತ ಉಗ್ರರಿಂದ ದಾಳಿ
ಭದ್ರತಾ ಪಡೆಗಳ ಮೇಲೆ ಶಂಕಿತ ಉಗ್ರರಿಂದ ದಾಳಿ

By

Published : Jan 27, 2021, 12:47 PM IST

Updated : Jan 27, 2021, 1:18 PM IST

ಶ್ರೀನಗರ:ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಶಮ್ಸಿಪೋರಾ ಪ್ರದೇಶದ ಹೆದ್ದಾರಿಯಲ್ಲಿ ಭದ್ರತಾ ಪಡೆಗಳ ಮೇಲೆ ಶಂಕಿತ ಉಗ್ರರು ಐಇಡಿ ಸ್ಫೋಟ ನಡೆಸಿದ್ದು, ಓರ್ವ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಅಲ್ಲದೇ ಮೂವರು ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ಗಾಯಗೊಂಡ ನಾಲ್ವರು ಸೇನಾ ಸೈನಿಕರಲ್ಲಿ ಒಬ್ಬರು ಶ್ರೀನಗರ ಸೈನ್ಯದ 92 ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ.

ಓದಿ:ಕೆಂಪು ಕೋಟೆಗೆ ಕೇಂದ್ರ ಸಚಿವ ಪ್ರಹ್ಲಾದ್​ ಪಟೇಲ್​ ಭೇಟಿ: ಫೋಟೋಗಳು ರಿಲೀಸ್​

ಸೇನೆಯ ಮೇಲೆ ಶಂಕಿತ ಉಗ್ರರು ಗುಂಡು ಹಾರಿಸಿದ ಪರಿಣಾಮ ನಾಲ್ವರು ಸೈನಿಕರು ಗಾಯಗೊಂಡಿದ್ದರು ಈ ಪೈಕಿ ಓರ್ವ ಹುತಾತ್ಮರಾಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡಿರುವ ಸೈನಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಪ್ರದೇಶವನ್ನು ಸುತ್ತುವರಿಯಲಾಗಿದೆ.

Last Updated : Jan 27, 2021, 1:18 PM IST

ABOUT THE AUTHOR

...view details