ಮಿಲಿಂದ್ ಸೋಮನ್ ಭಾರತದ ಫಿಟ್ನೆಸ್ ಮತ್ತು ಆರೋಗ್ಯದ ಅನಧಿಕೃತ ರಾಯಭಾರಿಯೆಂದೇ ಹೇಳಬಹುದು. ಆ ಬಗ್ಗೆ ಎರಡು ಮಾತಿಲ್ಲ. ಈ ನಟ ತಮ್ಮ ಫಿಟ್ನೆಸ್ ಜೀವನಶೈಲಿಯಿಂದಾಗಿ ಇದರರಿಗೂ ಸ್ಫೂರ್ತಿಯಾಗಿದ್ದಾರೆ.
ಈ ತಾಯಿಗೆ 80 ವರ್ಷವಾದರೂ ಈಗಲೂ ಯುವತಿ.. ಅದಕ್ಕೆ ಮಗ ಮಿಲಿಂದ್ ಕೊಟ್ಟ ಕಾರಣ ಇಲ್ಲಿದೆ.. - ಅನಧಿಕೃತ ರಾಯಭಾರಿ
ತಾಯಂದಿರ ದಿನದ ಪ್ರಯುಕ್ತ ಮಿಲಿಂದ್ ಸೋಮನ್ ತನ್ನ ತಾಯಿಯ ಜೊತೆ ವ್ಯಾಯಾಮ ಮಾಡಿದ ವೀಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ವಿಡೀಯೋ ನೋಡಿದ ನೆಟ್ಟಿಗರು ಅದಕ್ಕೆ ಪ್ರೀತಿಯಿಂದ ಕಾಮೆಂಟ್ ಮಾಡಿದ್ದಾರೆ.
ಮಿಲಿಂದ್ ಮಾತ್ರ ಪ್ರಭಾವಿತ ವ್ಯಕ್ತಿಯಲ್ಲ, ಅವರಿಗೆ ಜನ್ಮ ನೀಡಿದ ಉಷಾ ಸೋಮನ್ ಕೂಡ ಸ್ಫೂರ್ತಿದಾಯಕ ವೃದ್ಧ ಮಹಿಳೆ. ಅದ್ಹೇಗೆ ಇಲ್ಲಿದೆ ನೋಡಿ ಪುರಾವೆ. ಕಳೆದ ಭಾನುವಾರ ಮಿಲಿಂದ್ ತನ್ನ ತಾಯಿಯೊಂದಿಗೆ ಪುಶ್ ಅಪ್ಸ್ ಮಾಡಿರುವ ವಿಡಿಯೋವೊಂದನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಸುತ್ತಮುತ್ತಲಿನ ಎಲ್ಲರ ಕಾಳಜಿವಹಿಸುವ ನಮ್ಮ ತಾಯಂದಿರು ತಮ್ಮ ಮೇಲೆ ತಾವು ನಿರ್ಲಕ್ಷ್ಯದಿಂದಿರುತ್ತಾರೆ. ಈ ಬಾರಿಯ ತಾಯಂದಿರ ದಿನದಂದು ನಾವು ನಮ್ಮ ತಾಯಿಗೆ ಫಿಟ್ನೆಸ್ ಪಾಠ ಹೇಳಿಕೊಟ್ಟು, ಅವರ ಸಾಮರ್ಥ್ಯವನ್ನು ಅವರಿಗೋಸ್ಕರ ಬಳಸಲು ಸಹಕಾರಿಯಾಗೋಣ. ಉಷಾ ಸೋಮನ್, ಇನ್ನೂ 80ವರ್ಷದ ಯವತಿ. ಆಕೆ ನನ್ನೊಂದಿಗೆ 16 ಪುಷ್ಅಪ್ಸ್ ಮಾಡಿದ್ದು, ನನ್ನ ಕಣ್ಣನ್ನು ನಾನೇ ನಂಬದಾಗಿರುವೆ ತಮ್ಮ ತಾಯಿಯ ಮೇಲಿನ ಪ್ರೀತಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೋರ್ಪಡಿಸಿದ್ದಾರೆ. ಸದ್ಯ ಈಗ ಇದೇ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲಾಗಿದೆ. ಅಲ್ಲದೇ ಮಿಲಿಂದ್ ತಾಯಿಯ ಫಿಟ್ನೆಸ್ ಬಗ್ಗೆ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.