ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರದ ಎಲ್​ಒಸಿ ಬಳಿ ಭೂಕಂಪ: 4.3 ತೀವ್ರತೆ ದಾಖಲು - ಗಡಿ ನಿಯಂತ್ರಣ ರೇಖೆ

ಅತಿ ಹೆಚ್ಚು ಭೂಕಂಪ ಸಂಭವಿಸುವ ಪ್ರದೇಶಗಳಲ್ಲಿ ಜಮ್ಮು ಕಾಶ್ಮೀರ ಕೂಡಾ ಒಂದಾಗಿದ್ದು, ಎಲ್​ಒಸಿ ಬಳಿ ಇಂದು ಮುಂಜಾನೆ ಲಘು ಭೂಕಂಪ ಸಂಭವಿಸಿದೆ.

earthquake
ಭೂಕಂಪನ

By

Published : Sep 11, 2020, 1:52 PM IST

ಶ್ರೀನಗರ: ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಬಳಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಭೂಕಂಪನ ಸಂಭವಿಸಿದ ಕೇಂದ್ರಬಿಂದುವಿನಲ್ಲಿ ಸುಮಾರು 10 ಕಿಲೋಮೀಟರ್ ಆಳದಲ್ಲಿ ಮುಂಜಾನೆ 1.53ರ ವೇಳೆಗೆ ಭೂಮಿ ಕಂಪಿಸಿದೆ ಎಂದು ಹೇಳಲಾಗುತ್ತಿದೆ.

ಕಾಶ್ಮೀರ ಅತಿ ಹೆಚ್ಚು ಭೂಕಂಪನಗಳು ಸಂಭವಿಸುವ ಪ್ರದೇಶದಲ್ಲಿದೆ. ಇದಕ್ಕೂ ಮೊದಲು ಅತಿ ದೊಡ್ಡ ಭೂಕಂಪನ ಕಾಶ್ಮೀರದಲ್ಲಿ ಸಂಭವಿಸಿತ್ತು. ಅಕ್ಟೋಬರ್ 8, 2005ರಲ್ಲಿ ನಡೆದ 7.6ರ ತೀವ್ರತೆಯ ಭೂಕಂಪನ ಸಂಭವಿಸಿ ಸುಮಾರು 80 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

ಈ ದುರಂತದಲ್ಲಿ ಎಲ್​ಒಸಿ ಗಡಿಯಾಚೆಗೆ ಪಾಕ್​ ಹಾಗೂ ಭಾರತದ ಕಡೆಯ ಜನರು ಮೃತಪಟ್ಟಿದ್ದರು. ಆಗಾಗ ಭೂಕಂಪನ ಸರ್ವೇ ಸಾಮಾನ್ಯವಾಗಿದ್ದು, ಜೂನ್ 9ರಂದು ಸಹ ಭೂಕಂಪನ ಸಂಭವಿಸಿದ್ದ ಬಗ್ಗೆ ವರದಿಯಾಗಿತ್ತು.

ABOUT THE AUTHOR

...view details