ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದ ಪಾಲ್ಘರ್​ನಲ್ಲಿ ಲಘು ಭೂಕಂಪ - ಪಾಲ್ಘರ್ ಜಿಲ್ಲೆಯಲ್ಲಿ ಭೂಕಂಪ

ಪಾಲ್ಘರ್ ಜಿಲ್ಲೆಯಲ್ಲಿ ಇಂದು ಮುಂಜಾನೆ 2:50ಕ್ಕೆ 3.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

Mild tremor hits Maharashtra's Palghar, no casualties
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಭೂಕಂಪ; ತಪ್ಪಿತು ಹಾನಿ

By

Published : Sep 22, 2020, 8:01 AM IST

ಪಾಲ್ಘರ್ (ಮಹಾರಾಷ್ಟ್ರ):ಇಂದು ಮುಂಜಾನೆ 2:50ಕ್ಕೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಭೂಕಂಪದ ಹಿನ್ನೆಲೆ ಯಾವುದೇ ಪ್ರಾಣಹಾನಿ ಹಾಗೂ ಆಸ್ತಿ ಹಾನಿ ಆಗಿಲ್ಲ ಎಂದು ವರದಿಯಾಗಿದೆ. 2018ರಿಂದ ಪಾಲ್ಘರ್ ಜಿಲ್ಲೆಯಲ್ಲಿ ಕಡಿಮೆ ಮತ್ತು ಮಧ್ಯಮ ತೀವ್ರತೆಯ ಭೂಕಂಪಗಳು ಸಂಭವಿಸುತ್ತಲೇ ಇವೆ.

ಇದಕ್ಕೂ ಮೊದಲು ಸೆಪ್ಟೆಂಬರ್ 6ರಂದು ಪಾಲ್ಘರ್ ಜಿಲ್ಲೆಯಲ್ಲಿ 3.2 ತೀವ್ರತೆಯ ಭೂಕಂಪನ ಸಂಭವಿಸಿತ್ತು.

ಸೆ. 4ರ ರಾತ್ರಿಯಿಂದ 5ರ ಮುಂಜಾನೆಯವರೆಗೆ ಸಣ್ಣ ಪ್ರಮಾಣದಲ್ಲಿ ಭೂಕಂಪ ಸಂಭವಿಸಿತ್ತು. ಜಿಲ್ಲೆಯ ದಹನು ತಹಸಿಲ್​​ನಲ್ಲಿ 4.0 ತೀವ್ರತೆಯ ಮೊದಲ ಭೂಕಂಪ ಸಂಭವಿಸಿತ್ತು. ಎರಡನೇ ಬಾರಿ ಸೆ 5ರಂದು ರಾತ್ರಿ 12:05ರ ಸುಮಾರಿಗೆ 3.6 ತೀವ್ರತೆಯ ಭೂಕಂಪ ಮತ್ತು ಮುಂಜಾನೆ 6:36ರ ವೇಳೆಗೆ 2.7 ತೀವ್ರತೆಯ ಭೂಕಂಪ ಸಂಭವಿತ್ತು.

ABOUT THE AUTHOR

...view details