ನವದೆಹಲಿ: ಪಾಕಿಸ್ತಾನದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಕಾರಣ ವಿವಾದಕ್ಕೆ ಗುರಿಯಾಗಿರುವ ಗಾಯಕ ಮಿಖಾ ಸಿಂಗ್ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ.
ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿಧಿ 370 ರದ್ದು ಮಾಡಿದ್ದು ಹಾಗೂ ನಾನು ಪಾಕಿಸ್ತಾನದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದು ಒಂದೇ ಸಮಯ ವಾಗಿರುವುದು ಕಾಕತಾಳೀಯ.
ಉದ್ದೇಶಪೂರ್ವಕವಾಗಿ ನಾನು ಈ ಕೃತ್ಯ ಎಸಗಿಲ್ಲ. ನಾನು ಇಡೀ ಭಾರತೀಯರ ಕ್ಷಮೆ ಯಾಚಿಸುತ್ತಿದ್ದೇನೆ ಎಂದು ಮಿಖಾ ಅವರು ತೆರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಿಖಾ ಸಿಂಗ್ ಅವರು ಪಾಕಿಸ್ತಾನದಲ್ಲಿ ಸಂಗೀತ ಕಾರ್ಯಕ್ರಮ ನೀಡಿದ ಹಿನ್ನೆಲೆಯಲ್ಲಿ ಅವರ ಜೊತೆ ಯಾವ ಸಿನಿಮಾ ತಂಡವೂ ಕೆಲಸ ಮಾಡದಂತೆ ಭಾರತೀಯ ಸಿನಿ ಕಾರ್ಮಿಕರ ಸಂಘವು ಈಚೆಗೆ ಆದೇಶ ಹೊರಡಿಸಿತ್ತು. ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಮಿಖಾ ಅವರು ಕಾರ್ಯಕ್ರಮ ನೀಡಬೇಕಿತ್ತು. ಆದರೆ, ಸಂಘವು ಅದಕ್ಕೂ ಒಪ್ಪದೆ, ಸಲ್ಲು ಅವರನ್ನೂ ಸಿನಿಮಾ ರಂಗದಿಂದ ಬ್ಯಾನ್ ಮಾಡುವುದಾಗಿ ಖಡಕ್ ವಾರ್ನಿಂಗ್ ನೀಡಿತ್ತು.