ಕರ್ನಾಟಕ

karnataka

ETV Bharat / bharat

'ಪಾಕ್​ನಲ್ಲಿ ಹಾಡಿದ್ದಕ್ಕೆ ನನ್ನೊಬ್ಬನನ್ನೇ ಏಕೆ ಪ್ರಶ್ನಿಸುತ್ತೀರಾ? ನೇಹಾ, ಸೋನು ನಿಗಮ್‌ ಹಾಡಲಿಲ್ಲವೇ?' - ಜಮ್ಮು ಮತ್ತು ಕಾಶ್ಮೀರ

ಪಾಕಿಸ್ತಾನದಲ್ಲಿ ಗಾಯನ ಕಾರ್ಯಕ್ರಮ ನೀಡಿದ್ದರ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ದೇಶದ ಜನರ ಕ್ಷಮೆ ಕೇಳಲು ದೆಹಲಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಮಿಖಾ ಸಿಂಗ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗಾಯಕ ಮಿಖಾ ಸಿಂಗ್ ಸುದ್ದಿಗೋಷ್ಠಿ

By

Published : Aug 21, 2019, 8:58 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಸಂಬಂಧಿಸಿದಂತೆ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಪಾಕ್‌ನಲ್ಲಿ ನಿಷೇಧ ಹೇರಿದ ಬೆನ್ನಲ್ಲೇ ಗಾಯಕ ಮಿಖಾ ಸಿಂಗ್ ಅಲ್ಲಿಗೆ ಹೋಗಿ​ ಸಂಗೀತ ಕಾರ್ಯಕ್ರಮ ನಡೆಸಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಈ ಬಗ್ಗೆ ಸ್ಪಷ್ಟನೆ ನೀಡಲು ಹಾಗೂ ದೇಶದ ಜನರ ಕ್ಷಮೆ ಕೇಳಲು ದೆಹಲಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸುವ ವೇಳೆ ಕೋಪಗೊಂಡ ಅವರು ಗಾಯಕ ಸೋನು ನಿಗಮ್​, ಆತಿಫ್ ಅಸ್ಲಾಮ್ ಅವರನ್ನೂ ಎಳೆದು ತಂದಿದ್ದಾರೆ.

ಗಾಯಕ ಮಿಖಾ ಸಿಂಗ್ ಸುದ್ದಿಗೋಷ್ಠಿ

'ಕೆಲವು ತಿಂಗಳ ಹಿಂದೆ ಸೋನು ನಿಗಮ್​ ಮತ್ತು ಆತಿಫ್ ಅಸ್ಲಾಮ್ ಕೂಡ ಪಾಕ್‌ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಆಗ ಏಕೆ ನೀವು ಕೇಳಲಿಲ್ಲ? ಈಗ ನನ್ನನ್ನು ಏಕೆ ಪ್ರತ್ಯೇಕಿಸಲಾಗುತ್ತಿದೆ? ಎಂದು ಗರಂ ಆದ್ರು.

ABOUT THE AUTHOR

...view details