ಕರ್ನಾಟಕ

karnataka

ETV Bharat / bharat

ಕೊರೊನಾ ಮಧ್ಯೆ ವಿದೇಶದಿಂದ ತವರಿಗೆ ಮರಳಿದ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ? - Gulf countries

ಲಾಕ್​ಡೌನ್ ವೇಳೆ 13,74,237ಕ್ಕೂ ಹೆಚ್ಚು ಭಾರತೀಯರು (10 ಸೆಪ್ಟೆಂಬರ್ 2020 ರಂತೆ) ವಾಯು, ಭೂಮಿ ಮತ್ತು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಮರಳಿದ್ದಾರೆ. ಅವರಲ್ಲಿ 3,08,099 ಕಾರ್ಮಿಕರಾಗಿದ್ದಾರೆ. ಅವರು ಉದ್ಯೋಗ ಕಳೆದುಕೊಂಡಿಲ್ಲ, ಆದರೆ ಕೋವಿಡ್ -19 ಪರಿಸ್ಥಿತಿಯ ಕಾರಣದಿಂದ ಹಿಂದಿರುಗಿದ್ದಾರೆ.

ವಿದೇಶದಿಂದ ತವರಿಗೆ ಮರಳಿದ ಭಾರತೀಯರು
ವಿದೇಶದಿಂದ ತವರಿಗೆ ಮರಳಿದ ಭಾರತೀಯರು

By

Published : Sep 16, 2020, 6:22 PM IST

ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಿವಿಧ ದೇಶಗಳಿಂದ ಭಾರತಕ್ಕೆ ಮರಳಿದ ಭಾರತೀಯರು ಮತ್ತು ಭಾರತೀಯ ಕಾರ್ಮಿಕರ ಬಗ್ಗೆ ಕೇಳಿದ ಪ್ರಶ್ನೆಗೆ ಲೋಕಸಭೆಯಲ್ಲಿ ಇಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.

ಕೋವಿಡ್ -19 ಸಾಂಕ್ರಾಮಿಕ ಹಿನ್ನೆಲೆ ವಿಧಿಸಲಾದ ಲಾಕ್​ಡೌನ್​ನಿಂದ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳು ಮರಳಲು ಅನುಕೂಲವಾಗುವಂತೆ, ವಂದೇ ಭಾರತ್ ಮಿಷನ್​ನನ್ನು 2020ರ ಮೇ.7 ರಂದು ಪ್ರಾರಂಭಿಸಲಾಯಿತು.

ಅಂದಿನಿಂದ 13,74,237ಕ್ಕೂ ಹೆಚ್ಚು ಭಾರತೀಯರು (10 ಸೆಪ್ಟೆಂಬರ್ 2020 ರಂತೆ) ವಾಯು, ಭೂಮಿ ಮತ್ತು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಮರಳಿದ್ದಾರೆ. ಅವರಲ್ಲಿ 3,08,099 ಕಾರ್ಮಿಕರಾಗಿದ್ದಾರೆ. ಅವರು ಉದ್ಯೋಗ ಕಳೆದುಕೊಂಡಿಲ್ಲ, ಆದರೆ ಕೋವಿಡ್ -19 ಪರಿಸ್ಥಿತಿಯ ಕಾರಣದಿಂದ ಹಿಂದಿರುಗಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಒಟ್ಟು 3,08,099 ಭಾರತೀಯ ಕಾರ್ಮಿಕರು ವಿವಿಧ ವಿದೇಶಗಳಿಂದ ಮರಳಿದ್ದಾರೆ. ಈ ಪೈಕಿ ಗರಿಷ್ಠ ಸಂಖ್ಯೆಯ ಭಾರತೀಯ ಕಾರ್ಮಿಕರು ಯುಎಇ (308099), ಒಮನ್ (50536), ಸೌದಿ ಅರೇಬಿಯಾ (49000), ಕುವೈತ್ (44248), ಕತಾರ್ (30509) ದಿಂದ ಮರಳಿದ್ದಾರೆ. ಯುಎಸ್ಎಯಿಂದ 2390 ಭಾರತೀಯರು ಮರಳಿದ್ದಾರೆ. ಯುಕೆಯಿಂದ 1098, ಕೆನಡಾದಿಂದ 951, ಫ್ರಾನ್ಸ್‌ನಿಂದ 613 ಜನರನ್ನು ಕರೆ ತಂದಿದ್ದೇವೆ.

ABOUT THE AUTHOR

...view details