ಕರ್ನಾಟಕ

karnataka

By

Published : Jun 9, 2020, 11:41 AM IST

ETV Bharat / bharat

ವಲಸಿಗರನ್ನು 15 ದಿನಗಳೊಳಗೆ ಮನೆಗೆ ಕಳುಹಿಸಲು ರಾಜ್ಯಗಳಿಗೆ ಸುಪ್ರೀಂ ಸೂಚನೆ

15 ದಿನಗಳೊಳಗೆ ವಲಸೆ ಕಾರ್ಮಿಕರನ್ನು ಮನೆಗಳಿಗೆ ಕಳುಹಿಸಿ, ಅವರಿಗೆ ಉದ್ಯೋಗ ನೀಡುವ ವ್ಯವಸ್ಥೆ ಮಾಡುವಂತೆ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ.

Supreme Court
ಸುಪ್ರೀಂ ಕೋರ್ಟ್

ನವದೆಹಲಿ:ರಾಜ್ಯಗಳು ಆದಷ್ಟು ಬೇಗ ವಲಸೆ ಕಾರ್ಮಿಕರನ್ನು ಗುರುತಿಸಿ, 15 ದಿನಗಳಲ್ಲಿ ಅವರನ್ನು ಮನೆಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕೆಂದು ಸುಪ್ರೀಂಕೋರ್ಟ್​ ನಿರ್ದೇಶನ ನೀಡಿದೆ.

'ವಲಸಿಗರ ಮೇಲಿನ ಪ್ರಕರಣ ರದ್ದು ಮಾಡಿ'

ಇದರೊಂದಿಗೆ 2005ರ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ವಲಸಿಗರ ವಿರುದ್ಧ ದಾಖಲಾಗಿರುವ ಲಾಕ್​ಡೌನ್​ ನಿಯಮ ಉಲ್ಲಂಘನೆಯಂಥ ಕೇಸ್​ಗಳನ್ನು ರದ್ದು ಮಾಡಬೇಕೆಂದು ನ್ಯಾಯಾಲಯ ಸೂಚಿಸಿದ್ದು, ವಲಸೆ ಕಾರ್ಮಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಅಲ್ಲದೇ ವಲಸೆ ಕಾರ್ಮಿಕರು ತಮ್ಮ ತಮ್ಮ ಊರಿಗೆ ತೆರಳಲು ಅರ್ಜಿ ಸಲ್ಲಿಸಿದ 24 ಗಂಟೆಯೊಳಗಾಗಿ ಅವರಿಗೆ ಶ್ರಮಿಕ್​ ರೈಲುಗಳ ವ್ಯವಸ್ಥೆ ಮಾಡಬೇಕು. ವಲಸಿಗರು ತಮ್ಮ ರಾಜ್ಯಗಳಿಗೆ ಹಿಂದಿರುಗಿದ ಬಳಿಕ ಅವರಿಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳ ಕುರಿತ ಸಂಪೂರ್ಣ ಮಾಹಿತಿಯುಳ್ಳ ಅಫಿಡವಿಟ್‌ ಸಲ್ಲಿಸಬೇಕೆಂದು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂ ಆದೇಶ ನೀಡಿದೆ.

ಈ ಕುರಿತ ವಿಚಾರಣೆಯನ್ನು ಜುಲೈ 8 ರಂದು ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

ABOUT THE AUTHOR

...view details