ಕರ್ನಾಟಕ

karnataka

ETV Bharat / bharat

ರೈಲ್ವೆ ಹಳಿ ಬಳಿ ವಲಸೆ ಕಾರ್ಮಿಕರು ಶವವಾಗಿ ಪತ್ತೆ, ಕೊಲೆ ಶಂಕೆ! - ಪಾಲಕ್ಕಾಡ್ ಸುದ್ದಿ

ರೈಲ್ವೆ ಹಳಿ ಬಳಿ ಮೂವರು ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿರುವ ಘಟನೆ ಕೇರಳದ ಕಾಂಜಿಕೋಡ್​​​ ರೈಲ್ವೆ ಹಳಿ ಬಳಿ ನಡೆದಿದೆ. ರೈಲು ಡಿಕ್ಕಿಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇತರ ಕಾರ್ಮಿಕರು ಇದು ಕೊಲೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

Palakkada
ರೈಲ್ವೆ ಹಳಿ ಬಳಿ ವಲಸೆ ಕಾರ್ಮಿಕರು ಶವವಾಗಿ ಪತ್ತೆ

By

Published : Aug 4, 2020, 12:14 PM IST

Updated : Aug 4, 2020, 1:12 PM IST

ಪಾಲಕ್ಕಾಡ್(ಕೇರಳ): ಇಲ್ಲಿನ ಕಾಂಜಿಕೋಡ್ ರೈಲ್ವೆ ಹಳಿ ಬಳಿ ಮೂವರು ವಲಸೆ ಕಾರ್ಮಿಕರು ಶವವಾಗಿ ಪತ್ತೆಯಾಗಿದ್ದಾರೆ.

ಕಳೆದ ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮೃತರನ್ನು ಜಾರ್ಖಂಡ್ ಮೂಲದ ಕನಯಾ ಕುಮಾರ್, ಅರವಿಂದ್ ಕುಮಾರ್ ಮತ್ತು ಹರಿಯೋಮ್ ಕುಮಾರ್ ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ. ಇವರೆಲ್ಲ ಐಐಟಿ ಕಾಂಜಿಕೋಡ್​ನಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ವಲಸೆ ಕಾರ್ಮಿಕರು ಶವವಾಗಿ ಪತ್ತೆ

ರೈಲು ಡಿಕ್ಕಿಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇತರ ಕಾರ್ಮಿಕರು ಇದು ಕೊಲೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಅಗ್ನಿಶಾಮಕ ವಾಹನದ ಮೇಲೂ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Aug 4, 2020, 1:12 PM IST

ABOUT THE AUTHOR

...view details