ಕೋಲ್ಕತ್ತಾ:ಆಂಧ್ರ ಪ್ರದೇಶದಿಂದ ಕಾಲ್ನಡಿಗೆಯಲ್ಲೇ ಸ್ವಂತ ಮನೆಗೆ ತೆರಳುತ್ತಿದ್ದ ವಲಸಿಗ ಕಾರ್ಮಿಕ ಮಹಿಳೆಯೊಬ್ಬರು ಪಶ್ಚಿಮ ಬಂಗಾಳ - ಒಡಿಶಾ ಗಡಿಯ ಚೆಕ್ ಪೋಸ್ಟ್ ಬಳಿ ಮಗುವಿಗೆ ಜನ್ಮ ನೀಡಿದ್ದಾರೆ.
ಕಾಲ್ನಡಿಗೆಯಲ್ಲಿ ಮನೆಗೆ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಮಾರ್ಗ ಮಧ್ಯದಲ್ಲಿ ಮಗುವಿಗೆ ಜನ್ಮ - ಪಶ್ಚಿಮ ಬಂಗಾಳ - ಒಡಿಶಾ ಗಡಿ
ಹೊಟ್ಟೆಯಲ್ಲಿ ಮಗುವನ್ನು ಹೊತ್ತುಕೊಂಡೇ ಪತಿಯೊಂದಿಗೆ ಆಂಧ್ರದಿಂದ ತನ್ನೂರಿಗೆ ನಡೆದು ಸಾಗುತ್ತಿದ್ದ ವಲಸೆ ಕಾರ್ಮಿಕ ಮಹಿಳೆ ಪಶ್ಚಿಮ ಬಂಗಾಳ - ಒಡಿಶಾ ಗಡಿಯ ಚೆಕ್ ಪೋಸ್ಟ್ ಬಳಿ ಮಗುವಿಗೆ ಜನ್ಮ ನೀಡಿದ್ದಾಳೆ.
![ಕಾಲ್ನಡಿಗೆಯಲ್ಲಿ ಮನೆಗೆ ತೆರಳುತ್ತಿದ್ದ ಕಾರ್ಮಿಕ ಮಹಿಳೆ ಮಾರ್ಗ ಮಧ್ಯದಲ್ಲಿ ಮಗುವಿಗೆ ಜನ್ಮ woman gave birth to a baby girl at Orissa-Bangla border](https://etvbharatimages.akamaized.net/etvbharat/prod-images/768-512-7382917-thumbnail-3x2-megha.jpg)
ಪ.ಬಂ - ಒಡಿಶಾ ಗಡಿಯಲ್ಲಿ ಮಗುವಿಗೆ ಜನ್ಮ ನೀಡಿದ ವಲಸೆ ಕಾರ್ಮಿಕ ಮಹಿಳೆ
ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಭಂಗಾರ್ ನಿವಾಸಿ ನಜೀರಾ ಬೀಬಿ ಹೊಟ್ಟೆಯಲ್ಲಿ ಮಗುವನ್ನು ಹೊತ್ತುಕೊಂಡೇ ಪತಿಯೊಂದಿಗೆ ಆಂಧ್ರದಿಂದ ತನ್ನೂರಿಗೆ ನಡೆದುಕೊಂಡು ಹೋಗಲು ಆರಂಭಿಸಿದ್ದಳು.
ಲಾಕ್ಡೌನ್ನಿಂದಾಗಿ ವಾಹನ ಸೌಲಭ್ಯ ಸಿಗದೇ ಕೆಲ ದಿನಗಳಿಂದ ಇವರು ನಡೆದೇ ಸಾಗುತ್ತಿದ್ದರು. ಪಶ್ಚಿಮ ಬಂಗಾಳ - ಒಡಿಶಾ ಗಡಿಯ ಚೆಕ್ ಪೋಸ್ಟ್ ಬಳಿ ಆಕೆಗೆ ಹೆರಿಗೆ ನೋವು ಶುರುವಾಗಿದ್ದು, ಸಮೀಪವಿದ್ದ ದಂತ ಚಿಕಿತ್ಸಾಲಯದಲ್ಲಿ ದಾಖಲಿಸಲಾಯಿತು. ಅಲ್ಲಿ ಆಕೆಗೆ ಹೆರಿಗೆಯಾಗಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
Last Updated : May 28, 2020, 7:58 PM IST