ಕರ್ನಾಟಕ

karnataka

ETV Bharat / bharat

ಅಪಘಾತಕ್ಕೀಡಾದ ಮಿಗ್-29ಕೆ ಅವಶೇಷ ಪತ್ತೆಮಾಡಿದ ನೌಕಾ ಪಡೆ.. ಪೈಲಟ್​ಗಾಗಿ ಮುಂದುವರಿದ ಶೋಧ - ಅರಬ್ಬಿ ಸಮುದ್ರದಲ್ಲಿ ನೌಕಾದುರಂತ

ಮಿಗ್-29ಕೆ ತರಬೇತಿ ವಿಮಾನ ಪತನ ವಿಚಾರಕ್ಕೆ ಸಂಬಂಧಿಸಿದಂತೆ ಪೈಲೆಟ್‌ನ ಪತ್ತೆ ಹಚ್ಚಲು 9 ಯುದ್ಧನೌಕೆಗಳು, 14 ಏರ್​ಕ್ರಾಫ್ಟ್​ಗಳು ಹಾಗೂ ಫಾಸ್ಟ್​ ಇಂಟರ್​ಸೆಪ್ಟರ್​ ಕ್ರಾಫ್ಟ್​​ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ..

MiG-29K pilot still missing tragedy
ಮಿಗ್-29ಕೆ ಪತನ

By

Published : Nov 29, 2020, 10:12 PM IST

ಪಣಜಿ (ಗೋವಾ) :ಅರಬ್ಬಿ ಸಮುದ್ರದಲ್ಲಿ ನವೆಂಬರ್ 26ರಂದು ಮಿಗ್-29ಕೆ ತರಬೇತಿ ವಿಮಾನ ಪತನ ವಿಚಾರಕ್ಕೆ ಸಂಬಂಧಿಸಿದಂತೆ ಪೈಲೆಟ್‌ ಪತ್ತೆ ಹಚ್ಚಲು 9 ಯುದ್ಧನೌಕೆಗಳು, 14 ಏರ್​ಕ್ರಾಫ್ಟ್​ಗಳು ಹಾಗೂ ತನ್ನ ಫಾಸ್ಟ್​ ಇಂಟರ್​ಸೆಪ್ಟರ್​ ಕ್ರಾಫ್ಟ್​​ಗಳು ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ ಎಂದು ಭಾರತೀಯ ನೌಕಾಪಡೆ ಹೇಳಿದೆ.

ಈ ಬಗ್ಗೆ ಭಾನುವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತೀಯ ನೌಕಾ ಪಡೆ, ಸಮುದ್ರದಲ್ಲಿ ಪತನವಾದ ನೌಕೆಯ ಕೆಲ ಅವಶೇಷಗಳು ಪತ್ತೆಯಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ ಎಂದು ಮಾಹಿತಿ ನೀಡಿದೆ.

ಪೈಲೆಟ್​ಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. 9 ಯುದ್ಧ ನೌಕೆಗಳು, 14 ಏರ್​ಕ್ರಾಫ್ಟ್​ಗಳು ಶೋಧಕಾರ್ಯದಲ್ಲಿ ಪಾಲ್ಗೊಂಡಿವೆ. ಫಾಸ್ಟ್ ಇಂಟರ್​ಸೆಪ್ಟರ್ ಕ್ರಾಫ್ಟ್​ ಅನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸಾರಗರೋತ್ತರ ಮತ್ತು ಕರಾವಳಿ ಪೊಲೀಸರೂ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.

ಮೀನುಗಾರಿಕೆ ಮಾಡುವ ಸ್ಥಳೀಯ ಗ್ರಾಮಗಳಿಗೂ ವಿಷಯ ಮುಟ್ಟಿಸಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಅಪಘಾತ ಸಂಭವಿಸಿದ ವಿಮಾನದಲ್ಲಿದ್ದ ಇನ್ನೊಬ್ಬ ಪೈಲಟ್​ನನ್ನು ರಕ್ಷಿಸಲಾಗಿದೆ. ಮಿಗ್ -29ಕೆ ವಿಮಾನವು ಐಎನ್‌ಎಸ್ ವಿಕ್ರಮಾದಿತ್ಯದಿಂದ ಕಾರ್ಯ ನಿರ್ವಹಿಸುತ್ತಿತ್ತು.

ABOUT THE AUTHOR

...view details