ನವದೆಹಲಿ:ಈ ಬಾರಿಯ ಲೋಕಸಭೆ ಚುನಾವಣೆಗೆ ಬಿಹಾರದ ನವಡಾದಿಂದ ತಮಗೆ ಟಿಕೆಟ್ ನೀಡಲಿಲ್ಲವೆಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಹಿರಂಗವಾಗಿ ರಾಜ್ಯದ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವಡಾ ಕ್ಷೇತ್ರದಿಂದಲೇ ಗಿರಿರಾಜ್ ಸಿಂಗ್ 2014ರ ಚುಣಾವಣೆಯಲ್ಲಿ ಜಯ ಗಳಿಸಿ, ಕೇಂದ್ರದ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಉದ್ಯಮ ಖಾತೆ ಸಚಿವರೂ ಆಗಿದ್ದಾರೆ. ಆದರೂ ತಮಗೆ ಈ ಬಾರಿ ನವಡಾದಿಂದ ಸ್ಪರ್ಧಿಸಲು ಟಿಕೆಟ್ ನೀಡಿಲ್ಲವೆಂದು ಬಿಹಾರ ಬಿಜೆಪಿ ನಾಯಕರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ನವಡಾ ಟಿಕೆಟ್ ನೀಡಲಿಲ್ಲವೆಂದು ಬಿಜೆಪಿ ವಿರುದ್ಧ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಸಮಾಧಾನ ನನಗೆ ಬಿಹಾರದ ಬಿಜೆಪಿ ನಾಯಕತ್ವದ ಬಗ್ಗೆ ಮಾತ್ರ ಬೇಸರವಿದೆ. ನನ್ನ ಅನುಮತಿ ಇಲ್ಲದೆಯೇ ನವಡಾ ಬದಲಾಗಿ ಬೇಗುಸರೈನಿಂದ ಸ್ಪರ್ಧಿಸಲು ನನ್ನ ಹೆಸರು ಘೋಷಿಸಲಾಗಿದೆ. ಇದರಿಂದ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.1996ರಲ್ಲಿ ಹಾಗೂ 2014ರಲ್ಲಿ ಬೇಗುಸರೈನಿಂದ ಸ್ಪರ್ಧಿಸುವ ಇಚ್ಛೆ ಇತ್ತು. ಆದರೆ, ಭೋಲಾ ಸಿಂಗ್ರಿಗೆ ಅಲ್ಲಿಂದ ಟಿಕೆಟ್ ನೀಡಲಾಯಿತು. ನವಡಾದಿಂದ ನಾನು ಸ್ಪರ್ಧಿಸಿದೆ. ಅಲ್ಲಿನ ಜನರಿಗಾಗಿ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಬಿಹಾರದ ಬಿಜೆಪಿ ಈ ಬಗ್ಗೆ ನನಗೆ ಉತ್ತರಿಸಬೇಕು. ಇದರಿಂದ ನನಗೆ ತುಂಬಾ ನೋವಾಗಿದೆ. ಸ್ವಾಭಿಮಾನದೊಂದಿಗೆ ರಾಜಿಯ ಪ್ರಶ್ನೆಯೇ ಇಲ್ಲ ಎಂದೂ ಹೇಳಿದ್ದಾರೆ.ಬಿಜೆಪಿ ಮುಖಂಡ ಚಿರಾಗ್ ಪಸ್ವಾನ್ ಹಾಗೂ ಬಿಹಾರದ ಬಿಜೆಪಿ ಮುಖ್ಯಸ್ಥ ನಿತ್ಯಾನಂದ ರಾಯ್ ನನ್ನಿಷ್ಟದ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ಭರವಸೆ ನೀಡಿದ್ದರು. ಆದರೆ, ಈಗ ಹೀಗಾಗಿದೆ ಎಂದು ಬೇಸರದಿಂದ ನುಡಿದರು.