ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ):ಅಮೆರಿಕದಲ್ಲಿನ ಚೀನಾ ಮೂಲದ ಪ್ರಸಿದ್ಧ ವಿಡಿಯೋ ಅಪ್ಲಿಕೇಷನ್ ಟಿಕ್ಟಾಕ್ ಅನ್ನು ಖರೀದಿಸುವ ಮಾತುಕತೆಗೆ ಮತ್ತೆ ಮೈಕ್ರೋಸಾಫ್ಟ್ ಮುಂದಾಗಿದ್ದು, ಬಹುತೇಕ ಮಾತುಕತೆಗಳು ಪೂರ್ಣಗೊಂಡಿವೆ ಎಂದು ಹೇಳಲಾಗುತ್ತಿದೆ.
ಸೆಪ್ಟೆಂಬರ್ 15ರ ವೇಳೆಗೆ ಈ ಮಾತುಕತೆಗಳು ಪೂರ್ಣಗೊಳ್ಳಲಿವೆ ಎಂದು ಮೈಕ್ರೋಸಾಫ್ಟ್ ದೃಢಪಡಿಸಿದೆ. ಕೆಲವು ದಿನಗಳ ಹಿಂದಷ್ಟೇ ಮೈಕ್ರೋಸಾಫ್ಟ್ ಚೀನಾ ಮೂಲದ ಟಿಕ್ಟಾಕ್ ಅನ್ನು ಕೊಂಡುಕೊಳ್ಳಲು ಮುಂದಾಗಿತ್ತು. ಈ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಯ ಮೇರೆಗೆ ತನ್ನ ನಿಲುವಿನಿಂದ ಹಿಂದೆ ಸರಿದಿತ್ತು.
ಅಮೆರಿಕದ ವಾಲ್ಸ್ಟ್ರೀಟ್ ಜರ್ನಲ್ ಹೇಳುವಂತೆ ಟಿಕ್ ಟಾಕ್ನ ಮಾತೃಸಂಸ್ಥೆ ಬೈಟ್ಡಾನ್ಸ್ ಹಾಗೂ ಮೈಕ್ರೋಸಾಫ್ಟ್ನೊಂದಿಗೆ ಮಾತುಕತೆಗಳು ನಡೆದಿದ್ದು, ಒಪ್ಪಂದದ ಹಂತಕ್ಕೆ ಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯಿಂದ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವುದು ಸಂದೇಹ ಎಂದು ಸ್ಪಷ್ಟಪಡಿಸಿದೆ.