ಕರ್ನಾಟಕ

karnataka

ETV Bharat / bharat

ರಾಜೀವ್​ ಗಾಂಧಿ ಫೌಂಡೇಷನ್​ ಅವ್ಯವಹಾರ: ಗೃಹ ಇಲಾಖೆಯಿಂದ ನೂತನ ಸಮಿತಿ ರಚನೆ

ರಾಜೀವ್ ಗಾಂಧಿ ಫೌಂಡೇಷನ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳಿಂದ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿ ಬರುತ್ತಿದ್ದು, ಈಗ ಗೃಹ ಇಲಾಖೆ ನೂತನ ಸಮಿತಿ ರಚಿಸಿದೆ.

Rajiv Gandhi Foundation
ರಾಜೀವ್ ಗಾಂಧಿ ಫೌಂಡೇಷನ್

By

Published : Jul 8, 2020, 12:25 PM IST

ನವದೆಹಲಿ:ರಾಜೀವ್ ಗಾಂಧಿ ಫೌಂಡೇಷನ್​ನಿಂದ ವಿವಿಧ ರೀತಿಯ ಹಣಕಾಸು ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಅಂತರ್​ ಇಲಾಖಾ ಸಮಿತಿಯೊಂದನ್ನು ರಚಿಸಲು ಮುಂದಾಗಿದೆ.

ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ವಿದೇಶಿ ಬಂಡವಾಳ ನಿಯಂತ್ರಣ ಕಾಯ್ದೆಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ರಾಜೀವ್ ಗಾಂಧಿ ಫೌಂಡೇಷನ್, ಗಾಂಧಿ ಚಾರಿಟಬಲ್​ ಟ್ರಸ್ಟ್​ ಹಾಗೂ ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್ ಮೇಲೆ ಈ ಹೊಸ ಸಮಿತಿ ತನಿಖೆ ಕೈಗೊಳ್ಳಲಿದೆ.

ಈ ನೂತನ ಸಮಿತಿಗೆ ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರನ್ನು ಈ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಿಸುವುದಾಗಿ ಹೇಳಿಕೊಂಡಿದ್ದು. ಈ ಸಮಿತಿಯ ಬೇರೆ ಬೇರೆ ಇಲಾಖೆಗಳ ಸಹಾಯದಿಂದ ತನಿಖೆ ನಡೆಸಲಿದೆ.

ಇದಕ್ಕೂ ಮೊದಲು ಭಾರತೀಯ ಜನತಾ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಜೀವ್ ಗಾಂಧಿ ಫೌಂಡೇಷನ್​ ಚೀನಾದ ರಾಯಭಾರ ಕಚೇರಿಯಿಂದ ಮೂರು ಲಕ್ಷ ಡಾಲರ್​​ನಷ್ಟು ಮೊತ್ತದ ಹಣವನ್ನು ಅಕ್ರಮವಾಗಿ ಪಡೆದುಕೊಂಡಿತ್ತು ಎಂದು ಆರೋಪಿಸಿ ಕಾಂಗ್ರೆಸ್ ಹಾಗೂ ರಾಜೀವ್ ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜೊತೆಗೆ ಇದು ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಕಾಂಗ್ರೆಸ್ ಇದು ಸುಳ್ಳು, ಲಡಾಖ್​ ಗಡಿಯ ವಿಚಾರದಿಂದ ಜನರನ್ನು ದಾರಿತಪ್ಪಿಸಲು ಬಿಜೆಪಿ ಈ ತಂತ್ರವನ್ನು ರೂಪಿಸಿದೆ ಎಂದು ಪ್ರತ್ಯಾರೋಪ ಮಾಡಿತ್ತು. ಈಗ ಗೃಹ ಇಲಾಖೆ ಸಮಿತಿಯೊಂದನ್ನು ರಚಿಸಿದ್ದು, ಸತ್ಯಾಂಶ ಹೊರ ಬರಲಿದೆ.

ABOUT THE AUTHOR

...view details