ನವದೆಹಲಿ: ಭದ್ರತಾ ಪರಿಶೀಲನೆಯ ನಂತರ ಕಾಶ್ಮೀರದಿಂದ 7,000 ಕ್ಕೂ ಹೆಚ್ಚು ಅರೆಸೈನಿಕರನ್ನು ಕೂಡಲೇ ಹಿಂದಕ್ಕೆ ಕರೆಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯ ಆದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರ ಈಗ ಶಾಂತ... 7 ಸಾವಿರಕ್ಕೂ ಹೆಚ್ಚು ಸೈನಿಕರಿಗೆ ತಮ್ಮ ಸ್ಥಳಗಳಿಗೆ ಮರಳಲು ಆದೇಶ - ಜಮ್ಮು ಕಾಶ್ಮೀರ ಲೇಟೆಸ್ಟ್ ನ್ಯೂಸ್
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾದ ನಂತರ ಕಾಶ್ಮೀರಕ್ಕೆ ನಿಯೋಜನೆಗೊಂಡಿದ್ದ ಸೈನಿಕರಿಗೆ ಅಲ್ಲಿಂದ ವಾಪಸ್ ತೆರಳಲು ಆದೇಶಿಸಲಾಗಿದೆ.
![ಕಾಶ್ಮೀರ ಈಗ ಶಾಂತ... 7 ಸಾವಿರಕ್ಕೂ ಹೆಚ್ಚು ಸೈನಿಕರಿಗೆ ತಮ್ಮ ಸ್ಥಳಗಳಿಗೆ ಮರಳಲು ಆದೇಶ ಸೈನಿಕರಿಗೆ ವಾಪಾಸ್ ತೆರಳಲು ಆದೇಶ,withdrawal of over 7000 paramilitary personnel](https://etvbharatimages.akamaized.net/etvbharat/prod-images/768-512-5485207-thumbnail-3x2-brm.jpg)
ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನ ಕೇಂದ್ರ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಭದ್ರತೆಯನ್ನ ಹೆಚ್ಚಿಸಲಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸುವ ಭದ್ರಪಾ ಪಡೆ ಸಿಬ್ಬಂದಿಯನ್ನ ಜಮ್ಮು ಕಾಶ್ಮೀರಕ್ಕೆ ನಿಯೋಜನೆ ಮಾಡಲಾಗಿತ್ತು.
ಹೀಗೆ ನಿಯೋಜನೆಗೊಂಡಿದ್ದ, ಸಿಆರ್‌ಪಿಎಫ್- 24, ಬಿಎಸ್‌ಎಫ್- 12, ಐಟಿಬಿಪಿ- 12, ಸಿಐಎಸ್ಎಫ್- 12 ಮತ್ತು ಎಸ್‌ಎಸ್‌ಬಿ -12. ಒಟ್ಟು 72 ಪಡೆಗಳನ್ನ ತಮ್ಮ ಸ್ಥಳಗಳಿಗೆ ಮರಳಲು ಆದೇಶಿಸಲಾಗಿದೆ. ಈ ಹಿಂದೆ ಇದೇ ತಿಂಗಳ ಆರಂಭದಲ್ಲಿ 20 ಪಡೆಗಳನ್ನ ಕಾಶ್ಮೀರದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು.