ನವದೆಹಲಿ:3,400 ತಬ್ಲಿಘಿ ಜಮಾತ್ ಸದಸ್ಯರ ವೀಸಾಗಳನ್ನು ಕಪ್ಪುಪಟ್ಟಿಗೆ ಸೇರಿಸಲು ಮತ್ತು ರದ್ದುಗೊಳಿಸಲು ಗೃಹ ಸಚಿವಾಲಯ ಆದೇಶಿಸಿದೆ. ಈ ಕುರಿತ ಅರ್ಜಿಯನ್ನು ಸುಪ್ರೀಂಕೋರ್ಟ್ ಜುಲೈ 10 ರಂದು ವಿಚಾರಣೆ ನಡೆಸಲಿದೆ.
ಮೂರುವರೆ ಸಾವಿರ ತಬ್ಲಿಘಿಗಳ ವೀಸಾ ರದ್ದುಗೊಳಿಸಿದ ಕೇಂದ್ರ ಗೃಹ ಸಚಿವಾಲಯ - ತಬ್ಲಿಘಿ ಜಮತ್ ವಿಸಾ ರದ್ದುಗೊಳಿಸಿದ ಗೃಹ ಸಚಿವಾಲಯ,
ಸರಿಸುಮಾರು ಮೂರುವರೆ ಸಾವಿರ ತಬ್ಲಿಘಿ ಜಮಾತ್ ಸದಸ್ಯರ ವೀಸಾವನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿ ಆದೇಶ ಹೊರಡಿಸಿದೆ.
ಸಂಗ್ರಹ ಚಿತ್ರ
ಮೂಲಗಳ ಪ್ರಕಾರ, ಅರ್ಜಿದಾರರಿಗೆ ಈ ಬಗ್ಗೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವ ಆಯ್ಕೆ ಮುಕ್ತವಾಗಿರುತ್ತದೆ. ಕೇಂದ್ರ ಸರ್ಕಾರವು ವೀಸಾ ರದ್ದತಿ ಆದೇಶ ಪ್ರತಿಗಳನ್ನು ಅರ್ಜಿದಾರರಿಗೆ ಇ-ಮೇಲ್ ಮೂಲಕ ರವಾನಿಸಿದೆ. ಈ ಆದೇಶ ಪ್ರತಿಗಳನ್ನು ಅರ್ಜಿದಾರರು ವಕೀಲರಿಗೆ ನೀಡಬಹುದಾಗಿದ್ದು, ಈ ಮೂಲಕ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಬಹುದು.