ಮುಂಬೈ(ಮಹಾರಾಷ್ಟ್ರ) : ಶಿವಸೇನೆ ಸಂಸ್ಥಾಪಕ, ದಿವಂಗತ ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನದಂದು ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಪಕ್ಷದ ಹೊಸ ಧ್ವಜ ಅನಾವರಣ ಮಾಡಿದ್ದಾರೆ.
ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನ ನಾನು ಬದಲಾಯಿಸುವುದಿಲ್ಲ: ಉದ್ಧವ್ ಠಾಕ್ರೆಗೆ ರಾಜ್ ಟಾಂಗ್ - ಬಾಳಾ ಸಾಹೇಬ್ ಠಾಕ್ರೆ ಅವರ ಜನ್ಮದಿನ ಆಚರಣೆ
ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಮರನ್ನ ಹೊರಹಾಕಲು ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಿಳಿಸಿದ್ದಾರೆ.
![ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನ ನಾನು ಬದಲಾಯಿಸುವುದಿಲ್ಲ: ಉದ್ಧವ್ ಠಾಕ್ರೆಗೆ ರಾಜ್ ಟಾಂಗ್ MH-Raj Thackeray on CAA, Hindutwa, Goregaon, Mumbai](https://etvbharatimages.akamaized.net/etvbharat/prod-images/768-512-5818360-thumbnail-3x2-surya.jpg)
ಗೋರೆಗಾಂವ್‌ನಲ್ಲಿರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಂರನ್ನು ಹೊರಹಾಕಲು ಮೋದಿ ಸರ್ಕಾರಕ್ಕೆ ತಮ್ಮ ಬೆಂಬಲವಿದೆ ಎಂದು ತಿಳಿಸಿದ್ರು. ಇದೇ ವೇಳೆ "ಸರ್ಕಾರ ರಚಿಸಲು ನನ್ನ ಪಕ್ಷದ ಬಣ್ಣವನ್ನು ನಾನು ಬದಲಾಯಿಸುವುದಿಲ್ಲ" ಎಂದು ಕಾಂಗ್ರೆಸ್ ಮತ್ತು ಎನ್ಸಿಪಿ ಸಹಾಯದಿಂದ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿದ್ದ ಉದ್ಧವ್ ಠಾಕ್ರೆ ಅವರಿಗೆ ಟಾಂಗ್ ನೀಡಿದ್ರು.
ಇನ್ನು ಹೊಸ ಕೇಸರಿ ಧ್ವಜದ ಮಧ್ಯಭಾಗದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ರಾಜಮುದ್ರೆ ಹೊಂದಿದೆ. ರಾಜಮುದ್ರೆ ಎಂಬುದು ಅಧಿಕೃತ ಚತ್ರಪತಿ ಶಿವಾಜಿ ಮಹಾರಾಜರು ಪತ್ರಗಳಲ್ಲಿ ಬಳಸುತ್ತಿದ್ದ ರಾಜಮುದ್ರೆಯಾಗಿದೆ.