ಮುಂಬೈ: ಭಾರಿ ಮಳೆಯ ಹಿನ್ನೆಲೆಯಲ್ಲಿ ಮಹಾನಗರಿ ಮುಂಬೈ ಅಕ್ಷರಶಃ ತತ್ತರಿಸಿ ಹೋಗಿದೆ. ನಗರದ ಹಲವು ರೈಲ್ವೆ ನಿಲ್ದಾಣಗಳು ನೀರಿನಿಂದ ಜಲಾವೃತವಾಗಿವೆ. ವಾಹನ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.
ಧಾರಾಕಾರ ಮಳೆಗೆ ಮಹಾನಗರಿ ತತ್ತರ..! ಜನ ಜೀವನ ಅಸ್ತವ್ಯಸ್ತ - ರೈಲ್ವೆ ನಿಲ್ದಾಣ
ರಾಜ್ಯದಲ್ಲಿ ಹಲವೆಡೆ ಭಾರಿ ಮಳೆಯಾದ ಕಾರಣ ಸಿಯಾನ್ ಮತ್ತು ಮಾಟುಂಗ ರೈಲ್ವೆ ನಿಲ್ದಾಣದ ನಡುವಿನ ಮಾರ್ಗ ಮಧ್ಯದ ಹಳಿಗಳು ಪೂರ್ತಿಯಾಗಿ ನೀರಿನಿಂದಾಗಿ ಮುಳುಗಿ ಹೋಗಿದ್ದು, ಪರಿಣಾಮ ರೈಲ್ವೇ ಸಂಚಾರಕ್ಕೆ ತೊಡಕುಂಟಾಗಿದೆ.
ಭಾರಿ ಮಳೆ
ರಾಜ್ಯದಲ್ಲಿ ಹಲವೆಡೆ ಭಾರಿ ಮಳೆಯಾದ ಕಾರಣ ಸಿಯಾನ್ ಮತ್ತು ಮಾಟುಂಗ ರೈಲ್ವೆ ನಿಲ್ದಾಣದ ನಡುವಿನ ಮಾರ್ಗ ಮಧ್ಯದ ಹಳಿಗಳು ಪೂರ್ತಿಯಾಗಿ ನೀರಿನಿಂದಾಗಿ ಮುಳುಗಿ ಹೋಗಿದ್ದು, ಪರಿಣಾಮ ರೈಲ್ವೇ ಸಂಚಾರಕ್ಕೆ ತೊಡಕುಂಟಾಗಿದೆ.
ಇನ್ನು ನಗರದ ಹಲವಾರು ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ನಿವಾಸಿಗಳು ಪರದಾಟ ಅನುಭವಿಸುವಂತಾಗಿದೆ. ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಟ್ರಾಫಿಕ್ ಸಮಸ್ಯೆ ಸಹ ಎದುರಾಗಿದೆ.