ನವದೆಹಲಿ:ದೆಹಲಿಯ ಮೆಟ್ರೋ ರೈಲುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂಬ ಆಮ್ ಆದ್ಮಿ ಪಕ್ಷದ ಪ್ರಸ್ತಾವನೆಯನ್ನು ಪ್ರಧಾನಿ ಮೋದಿ ಪರಿಗಣಿಸಬಾರದು ಎಂದು 'ಮೆಟ್ರೋ ಮ್ಯಾನ್' ಎಂದೇ ಹೆಸರುವಾಸಿಯಾಗಿರುವ ಈ. ಶ್ರೀಧರನ್ ಪತ್ರ ಬರೆದಿದ್ದಾರೆ.
ದೆಹಲಿ ಮೆಟ್ರೋದ ಮುಖ್ಯಸ್ಥರಾಗಿದ್ದ ಶ್ರೀಧರನ್ ಅವರು, ಅದರ ಎಲ್ಲ ಪ್ರಗತಿಯ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರ ನಿರ್ಧಾರವನ್ನು ವಿರೋಧಿಸಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ದೆಹಲಿ ಸರ್ಕಾರದ ಈ ಪ್ರಸ್ತಾವನೆಗೆ ಪ್ರಧಾನಿ ಅಂಕಿತ ಹಾಕಬಾರದು. ಒಂದು ವರ್ಗಕ್ಕೆ ಮಾತ್ರ ಇಂತಹ ಅವಕಾಶ ನೀಡುವುದರಿಂದ ಅದಕ್ಷತೆ ಹಾಗೂ ದಿವಾಳಿತನ ಎದುರಾಗುತ್ತದೆ. ದೆಹಲಿ ಮೆಟ್ರೋ ರೈಲ್ ಕೊಆಪರೇಷನ್ನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವ ಇರುವುದರಿಂದ ಒಬ್ಬರೇ ಪಾಲುದಾರರು ಇಂತಹ ನಿರ್ಧಾರ ಕೈಗೊಳ್ಳುವಂತಿಲ್ಲ ಎಂದಿದ್ದಾರೆ.