ಕರ್ನಾಟಕ

karnataka

EDITORIAL: ಬಿಜೆಪಿ- ಸೇನೆ ಜಯ, ಕಾಂಗ್ರೆಸ್-ಎನ್​ಸಿಪಿ​ಗೆ ಮುಖಭಂಗ... ಮೋದಿ -ಫಡ್ನವೀಸ್​ಗೆ ತಣ್ಣನೆ ಶಾಕ್​​...!

By

Published : Oct 24, 2019, 11:47 PM IST

Updated : Oct 24, 2019, 11:53 PM IST

ದೇವೇಂದ್ರ ಫಡ್ನವಿಸ್ ಮತ್ತು ಅವರ ಸಚಿವರು ಕಳೆದ ಐದು ವರ್ಷಗಳಲ್ಲಿ ತಮ್ಮನ್ನು ತಾವು ಕನಿಷ್ಠ ದಕ್ಷರು ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಮರಾಠ ಮೀಸಲಾತಿಗೆ ಸುಪ್ರೀಂಕೋರ್ಟ್​ ಕೇಳಿದ ಪುರಾವೆ ಮುಖೇನ ಜಯ ಸಾಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬರಗಾಲ, ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆಯಂತಹ ಕೃಷಿ ಸಂಬಂಧಿತ ಅಶಾಂತಿ ಸಂಗತಿಗಳನ್ನು ನಿಭಾಯಿಸುವಲ್ಲಿ ಜಯ ಕಂಡುದಿದ್ದಾರೆ ಎಂಬುದು ಪಂಚಾಯತ್ ಚುನಾವಣೆಯ ವಿಜಯದ ನಗೆ ಸ್ಪಷ್ಟವಾಗುತ್ತದೆ. ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ತೆರವು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ತಮ್ಮಗೆ ಅಜೇಯವಾದ ಗೆಲುವು ಸಿಕ್ಕಿದೆ ಎಂದು ಭಾವಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ-ಶಿವಸೇನೆ ಮೈತ್ರಿ ಮತ್ತೆ ಅಧಿಕಾರಕ್ಕೇರಿದೆ. ಆದರೆ, ಮಹಾರಾಷ್ಟ್ರದ ಬಿಜೆಪಿಯ ಹಲವು ಖ್ಯಾತನಾಮರು ಸೋಲು ಕಂಡಿದ್ದಾರೆ. ಆರು ತಿಂಗಳ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಪ್ರಚಂಡ ವಿಜಯಗಳಿಸಿದ್ದ ಪ್ರಧಾನಿ ಮೋದಿ- ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜೋಡಿಗೆ ಮತದಾರರು ಲಘುವಾಗಿ ತೆಗೆದುಕೊಳ್ಳದಂತೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ- ಶಿವಸೇನೆ ಎರಡೂ ಸೇರಿ ಕ್ರಮವಾಗಿ 122 ಮತ್ತು 63 ಸ್ಥಾನಗಳು ಜಯಿಸಿ ಸುಲಭವಾಗಿ ಅಧಿಕಾರದ ಗದ್ದುಗೆ ಏರಿದ್ದವು. 5 ವರ್ಷಗಳ ನಂತರ ಎರಡೂ ಪಕ್ಷಗಳು ಒಟ್ಟಿಗೆ ಸ್ಪರ್ಧಿಸಿವೆ. ಉಭಯ ಪಕ್ಷಗಳ ವರಿಷ್ಠರು ಚುನಾವಣೆ ಪ್ರಚಾರದ ಸಮಯದಲ್ಲಿ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆಲುತ್ತೇವೆ ಎಂದು ಹೇಳಿಕೊಂಡೇ ಪ್ರಚಾರ ನಡೆಸಿದ್ದರು. ಇದಕ್ಕೆ ಪೂರಕ ಎಂಬಂತೆ ಸಮೀಕ್ಷೆಗಳು ಭಾರಿ ಗೆಲುವಿನ ಲೆಕ್ಕಾಚಾರವನ್ನೇ ಜನರ ಮುಂದಿಟ್ಟಿದ್ದವು. ಆದರೆ ಅವೆಲ್ಲ ಈಗ ತಲೆ ಕೆಳಗಾಗಿವೆ. ಕಮಲ- ಸೇನೆ ಮೈತ್ರಿಕೂಟ ಕಳೆದ ಬಾರಿಗಿಂತ ಸುಮಾರು 25 ಸ್ಥಾನ ಕಳೆದುಕೊಂಡಿದ್ದಾರೆ. ದೇವೇಂದ್ರ ಫಡ್ನವಿಸ್​ ಸಂಪುಟದ ಆರು ಸಚಿವರು ಹಾಗೂ ಅನೇಕ ಶಾಸಕರು ಸೋಲುಂಡಿದ್ದಾರೆ.

ದೇವೇಂದ್ರ ಫಡ್ನವೀಸ್ ಮತ್ತು ಅವರ ಸಚಿವರು ಕಳೆದ ಐದು ವರ್ಷಗಳಲ್ಲಿ ತಮ್ಮನ್ನು ತಾವು ಕನಿಷ್ಠ ಕನಿಷ್ಠ ದಕ್ಷರು ಎಂಬುದನ್ನು ಸಾಬೀತುಪಡಿಸಿಕೊಂಡಿದ್ದಾರೆ. ಮರಾಠ ಮೀಸಲಾತಿಗೆ ಸುಪ್ರೀಂಕೋರ್ಟ್​ ಕೇಳಿದ ಪುರಾವೆ ಮುಖೇನ ಜಯ ಸಾಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಬರಗಾಲ, ಕನಿಷ್ಠ ಬೆಂಬಲ ಬೆಲೆ, ಬೆಳೆ ವಿಮೆಯಂತಹ ಕೃಷಿ ಸಂಬಂಧಿತ ಅಶಾಂತಿ ಸಂಗತಿಗಳನ್ನು ನಿಭಾಯಿಸುವಲ್ಲಿ ಜಯ ಕಂಡುದಿದ್ದಾರೆ ಎಂಬುದು ಪಂಚಾಯತ್ ಚುನಾವಣೆಯ ವಿಜಯದ ನಗೆ ಸ್ಪಷ್ಟವಾಗುತ್ತದೆ. ಕಾಶ್ಮೀರಕ್ಕೆ ನೀಡಿದ್ದ ಆರ್ಟಿಕಲ್ 370 ತೆರವು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ ತಮ್ಮಗೆ ಅಜೇಯವಾದ ಗೆಲುವು ಸಿಕ್ಕಿದೆ ಎಂದು ಭಾವಿಸಿದ್ದಾರೆ.

ಬಿಜೆಪಿ-ಶಿವ ಸೇನೆ ಭಿನ್ನ

1. ರಾಜ್ಯದ ಅಗ್ರಗಣ್ಯ ನಾಯಕರಿಂದ ಹಿಡಿದು ಕೆಳ ಹಂತದ ಕಾರ್ಯಕರ್ತರ ವರೆಗೂ ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷವೇ ಇಲ್ಲ ಎಂಬಂತೆ ಫಡ್ನವಿಸ್​ ಹಾಗೂ ಅವರ ಸಂಪುಟದ ಸಹದ್ಯೋಗಿಗಳು ವರ್ತಿಸುತ್ತಿದ್ದರು. ಕಳೆದ 12-15 ತಿಂಗಳಲ್ಲಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಪ್ರಮುಖ ನಾಯಕರುಗಳನ್ನು ಬಿಜೆಪಿ ಮತ್ತು ಸೇನೆ ತಮ್ಮ ಪಕ್ಷಗಳಿಗೆ ರತ್ನಗಂಬಳಿ ಹಾಸಿ ಬರಮಾಡಿಕೊಂಡರು. ಆದರೆ, ವಿಪರ್ಯಾಸವೆಂದರೆ ಬಿಜೆಪಿಯೇ ಹೆಚ್ಚಿನವರನ್ನು ಪಕ್ಷಾಂತರಕ್ಕೆ ಒಳಪಡಿಸಿ, ಕೆಲವರನ್ನು ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ಬೆದರಿಕೆಗೆ ಬಳಸಿಕೊಂಡು ಬಲವಂತದಿಂದ ಬರಮಾಡಿಕೊಂಡು ವಿರೋಧ ಪಕ್ಷ ಎಲ್ಲಿದೆ ಎಂದು ವರ್ತಿಸಿದ್ದು ದುರಹಂಕಾರದ ಪರಮಾವಧಿ ಎನ್ನುವುದನ್ನ ಫಲಿತಾಂಶ ತೋರಿಸಿಕೊಟ್ಟಿದೆ.

2. ಬಿಜೆಪಿ ತನ್ನದೇ ಆದ ಹಿಂಬಾಲಕರ ಪಡೆಯನ್ನು ನಂಬಿಕೊಂಡಿತ್ತು. ಪಕ್ಷದ ನಾಯಕರು ಬಿಜೆಪಿಗೆ ಸೇರ್ಪಡೆ ಆಗಿದ್ದರೂ ಹೆಚ್ಚಿನ ಕಾರ್ಯಕರ್ತರು ಮೂಲ ಪಕ್ಷದಲ್ಲಿ ಉಳಿದು ಕೊಂಡಿದ್ದರು. ಕಾಂಗ್ರೆಸ್ ಮತ್ತು ಎನ್‌ಸಿಪಿಯ ಮೂಲ ಬೆಂಬಲಿಗರು ಪಕ್ಷಗಳ ಉಳಿದ ಮುಖಂಡರೊಂದಿಗೆ ಉತ್ತಮವಾದ ಸಂಪರ್ಕ ಹೊಂದಿದ್ದರು.

3. ಬಿಜೆಪಿ-ಶಿವಸೇನೆಗೆ ಬಂದ ಕೆಲವು ಮತಗಳು ಬಳುವಳಿ ರೂಪದವು. ಈ ಮತದಾರರು ಕಾಂಗ್ರೆಸ್ ಮತ್ತು ಎನ್‌ಸಿಪಿ ಬಗ್ಗೆ ಕೋಪ ಅಥವಾ ಅಸಮಾಧಾನ ಹೊಂದಿದ್ದಾರೆ. ಅವರಿಗೆ ಸ್ವಲ್ಪ ಪಾಠ ಕಲಿಸಲು ಬಯಸಿದ್ದಾರೆ. ಉತ್ತರ ಪ್ರದೇಶದಲ್ಲಿನಂತೆ ಕಾಂಗ್ರೆಸ್ ಒಳಗಿನ ವಿರೋಧದ ನಡೆ ಇದಕ್ಕೆ ಕಾರಣವಾಗಿದೆ.

4. ಬಿಜೆಪಿ ಈ ಹಿಂದೆ ಮರಾಠರು ಮತ್ತು ಅವರ ಸಹಕಾರಿ ಸಂಸ್ಥೆಗಳ ವಿರುದ್ಧ ಒಬಿಸಿ ಒಕ್ಕೂಟವನ್ನು ಮುನ್ನೆಲೆಗೆ ತರಲು ಪ್ರಯತ್ನಿಸಿದೆ. ಪಶ್ಚಿಮ ಮಹಾರಾಷ್ಟ್ರದಲ್ಲಿ ಸಹಕಾರ ಸಂಘಗಳು ಬಹಳ ಪ್ರಬಲವಾಗಿದ್ದು, ಈ ಭಾಗದಲ್ಲಿ ಬಿಜೆಪಿ ನೆಲೆಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಿವಿಧ ಕಾರಣಗಳಿಂದ ಈ ಭಾಗದಲ್ಲಿ ಕಳೆದ ಕೆಲವು ತಿಂಗಳಿಂದ ಬಿಜೆಪಿ ವಿರೋಧಿ ಭಾವನೆ ಹೆಚ್ಚಾಗಿ ಅದು ಪರಾಕಾಷ್ಠೆ ಮುಟ್ಟಿದೆ. ರಾಜ್ಯ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣ ಎಂದು ಕರೆಯಲ್ಪಡುವ ಇಡಿ ವರದಿಯಲ್ಲಿ ಶರದ್ ಪವಾರ್ ಅವರ ಹೆಸರು ಕಾಣಿಸಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ಪಶ್ಚಿಮ ಮಹಾರಾಷ್ಟ್ರದಲ್ಲಿ ಇದಕ್ಕಿಂತ ಭಿನ್ನವಾದ ಸಾಮಾಜಿಕ ವಿದ್ಯಮಾನಗಳು ಚುನಾವಣಾ ಪೂರ್ವದಲ್ಲಿ ನಡೆದವು. ಕೃಷಿಯ ಬಿಕ್ಕಟ್ಟು, ರೈತರ ಚಳವಳಿ, ಕನಿಷ್ಠ ಬೆಂಬಲ ಬೆಲೆ, ಸಾಲ ಮನ್ನಾ ಯೋಜನೆಯಂತಹ ವಿವಾದಗಳು ತೀವ್ರವಾದ ಚರ್ಚಗೆ ಗ್ರಾಸವಾದವು. ಇಷ್ಟೆಲ್ಲ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜಯದ ನಗೆ ಬೀರಿದ್ದರೂ ಮಹಾ ಚುನಾವಣೆಯಲ್ಲಿ ಮೈತ್ರಿಕೂಟವು ಗ್ರಾಮೀಣ ಪ್ರದೇಶಗಳಿಂದ ಹೊಡೆತ ತಿಂದಿದೆ. ಇದರಿಂದ ಅದು ತಕ್ಕುದಾದ ಪಾಠ ಕಲಿಯಬೇಕಿದೆ.

5. ಆರ್ಥಿಕ ಹಿಂಜರಿತ ಸಹ ಚುನಾವಣೆ ಫಲಿತಾಂಶದ ಮೇಲೂ ತನ್ನ ಪ್ರಭಾವ ಬೀರಿದೆ. ಪುಣೆ, ನಾಸಿಕ್ ಮತ್ತು ಔರಂಗಾಬಾದ್​ನಲ್ಲಿನ ವಾಹನ ತಯಾರಕರು ಸಾಕಷ್ಟು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ನಗರಗಳಲ್ಲಿನ ಪೂರಕ ಕೈಗಾರಿಕೆಗಳಲ್ಲಿ ಹೆಚ್ಚಿನ ಉದ್ಯೋಗ ನಷ್ಟವನ್ನು ಕಂಡಬಂದಿದೆ. ಆದರೆ, ರಾಜ್ಯ ಸರ್ಕಾರ ಈ ಸಂಗತಿಗಳನ್ನು ಒಪ್ಪಿಕೊಳ್ಳು ಕನಿಷ್ಠ ಸೌಜನ್ಯ ತೋರದೆ ಉದ್ಯೋಗ ನಷ್ಟದ ಬಗ್ಗೆ ಒಂದೇ ಒಂದು ಮಾತನ್ನೂ ಆಡಲಿಲ್ಲ.

6. ರಾಜ್ಯ ರಾಜಕರಾಣದ ಮತ್ತು ರಾಷ್ಟ್ರ ರಾಜಕಾರಣದ ಪ್ರಭಾವಿ ನಾಯಕರನ್ನು ಹೊಂದಿರುವ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಅಂತರ ತೀರ ಕಡಿಮೆ ಮಟ್ಟದಿಂದ ಕೂಡಿದೆ. ಆರ್‌ಎಸ್‌ಎಸ್‌ನ ಕೇಂದ್ರ ಸ್ಥಾನವಾದ ನಾಗ್ಪುರ ಮತ್ತು ನಿತಿನ್ ಗಡ್ಕರಿ ಹಾಗೂ ದೇವೇಂದ್ರ ಫಡ್ನವಿಸ್ ಅವರು ಪ್ರತಿನಿಧಿಸುವ ಬಿಜೆಪಿಯ ಭದ್ರಕೋಟೆ ಎಂಬ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಬಹಳ ಕಡಿಮೆ. ಜೊತೆಗೆ ಕಾಂಗ್ರೆಸ್ ಇಲ್ಲಿ ಎರಡನೇ ಸ್ಥಾನದಲ್ಲಿರುವುದು ಬಿಜೆಪಿಗೆ ದೊಡ್ಡ ಪಾಠವಾಗಬೇಕಿದೆ.

Last Updated : Oct 24, 2019, 11:53 PM IST

ABOUT THE AUTHOR

...view details