ಕರ್ನಾಟಕ

karnataka

ETV Bharat / bharat

ಉತ್ತರ ಪ್ರದೇಶದಲ್ಲಿ ಉದ್ಯೋಗ ಪಡೆಯಲು 'ಅರ್ಹತೆ'ಯೊಂದೇ ಮಾನದಂಡ: ಯೋಗಿ ಆದಿತ್ಯನಾಥ್

ನೇಮಕಾತಿಯಲ್ಲಿ ನ್ಯಾಯ ಮತ್ತು ಪಾರದರ್ಶಕತೆ ತಮ್ಮ ಸರ್ಕಾರದ ವಿಶಿಷ್ಟ ಲಕ್ಷಣವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Adityanath
ಯೋಗಿ ಆದಿತ್ಯನಾಥ್

By

Published : Oct 24, 2020, 6:43 AM IST

ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಉದ್ಯೋಗ ಪಡೆಯಲು 'ಅರ್ಹತೆ' ಮಾತ್ರ ಮಾನದಂಡ ಎಂದು ಪ್ರತಿಪಾದಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನೇಮಕಾತಿಯಲ್ಲಿ ನ್ಯಾಯ ಮತ್ತು ಪಾರದರ್ಶಕತೆ ತಮ್ಮ ಸರ್ಕಾರದ ವಿಶಿಷ್ಟ ಲಕ್ಷಣವಾಗಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

"ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಿಲ್ಲ. ಈ ಪ್ರಕ್ರಿಯೆಯಲ್ಲಿ ಕೆಲವು ಭ್ರಷ್ಟಾಚಾರಗಳು ಕಂಡುಬಂದರೂ ಜೈಲು ಮಾತ್ರ ತಪ್ಪಿತಸ್ಥರ ತಾಣವಾಗಿದೆ" ಹೊಸದಾಗಿ ನೇಮಕಗೊಂಡ ಸಹಾಯಕ ಶಿಕ್ಷಕರಿಗೆ ನೇಮಕಾತಿ ಪತ್ರಗಳ ವಿತರಣೆ ಸಂದರ್ಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಹೀಗೆ ಹೇಳಿದ್ದಾರೆ.

ಹಿಂದಿನ ಆಡಳಿತದ ಅವಧಿಯಲ್ಲಿ ಉತ್ತರ ಪ್ರದೇಶದ ಸಾರ್ವಜನಿಕ ಸೇವಾ ಆಯೋಗದಲ್ಲಿ (ಯುಪಿಪಿಎಸ್​ಸಿ) ಭ್ರಷ್ಟಾಚಾರ ಚಾಲ್ತಿಯಲ್ಲಿತ್ತು ಎಂದು ಸಿಎಂ ಆರೋಪಿಸಿದ್ದಾರೆ. "ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮಾತ್ರ ನೇಮಕಾತಿಗಳನ್ನು ಮಾಡಲಾಯಿತು" ಎಂದು ಹೇಳಿಕೆಯಲ್ಲಿ ದೂರಿದ್ದಾರೆ.

ಸುಮಾರು 3.5 ಲಕ್ಷ ಯುವಕರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿರುವ ಯೋಗಿ ಆದಿತ್ಯನಾಥ್, ಹೊಸದಾಗಿ ನೇಮಕಗೊಂಡ ಕೆಲವು ಸಹಾಯಕ ಶಿಕ್ಷಕರೊಂದಿಗೆ ಮಾತನಾಡಿದ್ದಾರೆ.

ABOUT THE AUTHOR

...view details