ಕರ್ನಾಟಕ

karnataka

ETV Bharat / bharat

ಮಗಳ ದೇಹದಲ್ಲಿ ಬೇರ‍್ಯಾರೋ ಇದ್ದಾರೆಂದು ಶಂಕಿಸಿ ಕೊಂದ ತಾಯಿ! - ಪಂಜಾಬ್​ನಲ್ಲಿ ಐದು ವರ್ಷದ ಮಗಳ ಕೊಲೆಗೈದ ತಾಯಿ

ಮಗಳ ದೇಹದಲ್ಲಿ ಬೇರೆ ಯಾರೋ ಇದ್ದಾರೆಂದು ಶಂಕಿಸಿದ ತಾಯಿ ಆಕೆಯ ಕೊಲೆ ಮಾಡಿರುವ ಘಟನೆ ನಡೆದಿದೆ.

Ludhiana crime news
Ludhiana crime news

By

Published : Oct 18, 2020, 11:48 AM IST

ಲೂಧಿಯಾನ್​:ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿರುವ ಪಾಪಿ ತಾಯಿಯೊಬ್ಬಳು ಐದು ವರ್ಷದ ಮಗಳ ಕೊಲೆ ಮಾಡಿರುವ ಘಟನೆ ಪಂಜಾಬ್​ನ ಲೂಧಿಯಾನ್​​ದಲ್ಲಿ ನಡೆದಿದೆ.

ಮಗಳ ದೇಹದಲ್ಲಿ ಬೇರ‍್ಯಾರೋ ಇದ್ದಾರೆಂದು ಶಂಕೆ ವ್ಯಕ್ತ ಪಡಿಸಿ ತಾಯಿ ಈ ರೀತಿಯಾಗಿ ಕೊಲೆ ಮಾಡಿದ್ದಾಳೆಂದು ತಿಳಿದು ಬಂದಿದೆ. ವಲಸೆ ಕಾರ್ಮಿಕರಾಗಿ ಕೆಲಸ ಮಾಡ್ತಿದ್ದ ಕುಟುಂಬ ಸೆಲಂ ಪ್ರದೇಶದಲ್ಲಿ ವಾಸವಾಗಿದ್ದಳು. ಮನೆಯಲ್ಲಿ ಗಂಡ ಇಲ್ಲದ ವೇಳೆ ಈ ಕೃತ್ಯವೆಸಗಿದ್ದಾಳೆ ಎಂದು ಲೂಧಿಯಾನ್​ ಎಡಿಸಿಪಿ ದೀಪಕ್​​​ ಪಾರ್ಕೆ ತಿಳಿಸಿದ್ದಾರೆ.

ಐದು ವರ್ಷದ ಮಗಳ ಕೊಲೆಗೈದ ಪಾಪಿ ತಾಯಿ

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮಹಿಳೆಯ ಬಂಧನ ಮಾಡಲಾಗಿದ್ದು, ಮೃತ ಬಾಲಕಿಯ ಶವವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಮಹಿಳೆ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಳು ಎಂದು ತಿಳಿದು ಬಂದಿದೆ.

ABOUT THE AUTHOR

...view details